ಗೂಗಲ್ ನೆರವಿನಿಂದ ಕೊಲೆ ಪ್ರಕರಣದಲ್ಲಿ ದೋಷಮುಕ್ತನಾದ ವಿದ್ಯಾರ್ಥಿ – News Mirchi

ಗೂಗಲ್ ನೆರವಿನಿಂದ ಕೊಲೆ ಪ್ರಕರಣದಲ್ಲಿ ದೋಷಮುಕ್ತನಾದ ವಿದ್ಯಾರ್ಥಿ

ಕಾನ್ಪುರ: ಕೊಲೆ ಪ್ರಕರಣದಲ್ಲಿ ಸಿಲುಕಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಗೂಗಲ್ ಸಹಾಯದಿಂದ ನಿರಪರಾಧಿಯಾಗಿ ಸಾಬೀತಾದ ಘಟನೆ ನಡೆದಿದೆ. ಒಂದು ವರ್ಷದಿಂದ ವಿಚಾರಣೆ ಎದುರಿಸುತ್ತಿದ್ದ ಕಾಲೇಜು ವಿದ್ಯಾರ್ಥಿ ಗೂಗಲ್ ನೆರವಿನಿಂದ ದೋಷಮುಕ್ತನಾಗಿ ಹೊರಬಂದಿದ್ದಾನೆ. ಗೂಗಲ್ ಸಹಾಯಕ್ಕೆ ಆತ ಧನ್ಯವಾದಗಳನ್ನು ಅರ್ಪಿಸಿದ್ದಾನೆ.

ಹನ್ನೊಂದು ವರ್ಷದ ಬಾಲಕ ರೆಹಾನ್ ಆಗಸ್ಟ್ 20, 2016 ರ ಸಂಜೆ ಕೊಲೆಯಾಗಿದ್ದನು. ಇಂಡಿಯನ್ ಏರ್ ಫೋರ್ಸ್ ಉದ್ಯೋಗಿಯೊಬ್ಬರ ಮಗನಾದ ಜೈ ಪ್ರತಾಪ್ ಸಿಂಗ್ ಅಲಿಯಾಸ್ ಮೋಹಿತ್ ಎಂಬಾತನನ್ನು ಬಾಲಕನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಕೊಲೆಯಾದ ಸಮಯದಲ್ಲಿ ತಮ್ಮ ಪುತ್ರ ಆನ್ಲೈನ್ ನಲ್ಲಿ ಅನಿಮೇನ್ ಡಿಸೈನ್ ಗೆ ಸಂಬಂಧಿಸಿದಂತೆ ಉದ್ಯೋಗ ಮಾಡುತ್ತಿದ್ದ ಎಂದು ಪೋಷಕರು ಹೇಳಿದರು. ಆದರೂ ನಂಬದ ಪೊಲೀಸರು ಆತನನ್ನು ಬಂಧಿಸಿದ್ದರು.

ಆ ವೇಳೆಯಲ್ಲಿ ಆತ ಆನ್ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಸಾಬೀತು ಪಡಿಸುವ ಪ್ರಯತ್ನವಾಗಿ ಗೂಗಲ್ ಸಂಸ್ಥೆಯ ಮೊರೆ ಹೋದರು. ಬಾಲಕನ ಕೊಲೆಯಾದ ದಿನ 4 ರಿಂದ 11 ಗಂಟೆಯವರೆಗ ಮೋಹಿತ್ ತಮ್ಮ ಐಪಿ ವಿಳಾಸದೊಂದಿಗೆ ಆನ್ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಸಾಕ್ಷಿ ಸಹಿತ ಗೂಗಲ್ ವರದಿ ನೀಡಿತು.

ವರದಿಯಲ್ಲಿ ವಿದ್ಯಾರ್ಥಿಯ ಕಾರ್ಯನಿರ್ವಹಿಸಿದ ಸಮಯ, ಇದ್ದ ಪ್ರದೇಶ ಮತ್ತು ವರ್ಕ್ ಹಿಸ್ಟರಿ, ವಿವಿಧ ವೆಬ್ಸೈಟ್ ಗಳಿಗೆ ಭೇಟಿ ನೀಡಿದ್ದು ಇತರೆ ವಿಷಯಗಳನ್ನು ಗೂಗಲ್ ನಿಂದ ಪೋಷಕರು ಸಂಗ್ರಹಿಸಿದ್ದರು. ಇದನ್ನು ನ್ಯಾಯಾಲಯದಲ್ಲಿ ಸಲ್ಲಿಸಿದಾಗ ನ್ಯಾಯಾಲಯ ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೋಹಿತ್ ನನ್ನು ದೋಷಮುಕ್ತಗೊಳಿಸಿತು.

 

Get Latest updates on WhatsApp. Send ‘Add Me’ to 8550851559

Loading...