ಗೂಗಲ್ ಪೇಮೆಂಟ್ ಆಪ್ “ತೇಜ್”, ಹಣ ಗಳಿಸಲೂ ಇದೆ ಅವಕಾಶ – News Mirchi

ಗೂಗಲ್ ಪೇಮೆಂಟ್ ಆಪ್ “ತೇಜ್”, ಹಣ ಗಳಿಸಲೂ ಇದೆ ಅವಕಾಶ

ಟೆಕ್ ದಿಗ್ಗಜ ಗೂಗಲ್ ತನ್ನ ಮೊಬೈಲ್ ಪಾವತಿ ಸೇವೆಯನ್ನು ಭಾರತದಲ್ಲಿ ಆರಂಭಿಸಿದೆ. “ತೇಜ್” ಹೆಸರಿನಲ್ಲಿ ಈ ಸೇವೆಗಳು ಲಭ್ಯವಿದೆ. ನಿಮ್ಮ ಹಣವನ್ನು ಯುಪಿಐ ಐಡಿ, ಕ್ಯೂ.ಆರ್.ಕೋಡ್, ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲು ಈ ಪಾವತಿ ಸೇವೆ ಅನುವು ಮಾಡಿಕೊಡುತ್ತದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮೊಬೈಲ್ ಗಳಿಗೆ ಈ ಸೇವೆ ಲಭ್ಯವಿದೆ. ಈ ಅಪ್ಲಿಕೇಶನ್ ಕುರಿತು ಹೆಚ್ಚಿನ ಮಾಹಿತಿ ನೀಡಲು ಗೂಗಲ್ ದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿಯವರು ಅಧಿಕೃತವಾಗಿ ಈ ಆಪ್ ಸೇವೆಗೆ ಚಾಲನೆ ನೀಡಿದ್ದಾರೆ.

ಗೂಗಲ್ ಈ ಆಪ್ ಅನ್ನು ಪ್ರಮೋಟ್ ಮಾಡಲು ರೆಫರಲ್ ರಿವಾರ್ಡ್ ಗಳನ್ನೂ ಗೂಗಲ್ ಪ್ರಕಟಿಸಿದೆ. ಈ ಆಪ್ ಅನ್ನು ನೀವು ನಿಮ್ಮ ಸ್ನೇಹಿತರಿಗೆ ರೆಫರ್ ಮಾಡಿ, ಅದರಲ್ಲಿ ಲಾಗಿನ್ ಮಾಡಿ ಪೇಮೆಂಟ್ ಮಾಡಿದರೆ ನೀವು ಮತ್ತು ನಿಮ್ಮ ಸ್ನೇಹಿತ ರೂ.51 ರಿವಾರ್ಡ್ ಪಡೆಯಲಿದ್ದೀರಿ. ಹೀಗೆ ಎಷ್ಟು ಹೆಚ್ಚು ಜನರಿಗೆ ರೆಫರ್ ಮಾಡುತ್ತೀರೋ ಅಷ್ಟು ಹಣ ಗಳಿಸಲೂ ಅವಕಾಶವಿದೆ. ಆದರೆ ಇದಕ್ಕೆ ಗರಿಷ್ಟ 9 ಸಾವಿರದ ಮಿತಿಯಿದೆ. 2018 ಏಪ್ರಿಲ್ 1 ರವರೆಗೆ ಈ ರೆಫರಲ್ ಆಫರ್ ಲಭ್ಯವಿರುತ್ತದೆ.

ಎಲ್ಲಾ ಸ್ಥಳೀಯ ಬ್ಯಾಂಕುಗಳು ಸೇರಿದಂತೆ, ಡಾಮಿನೋಸ್, ರೆಡ್ ಬಸ್ ಮತ್ತು ಪಿವಿಆರ್ ಗಳನ್ನು ತಮ್ಮ ಪಾವತಿ ಸೇವೆಯ ಪಾಲುದಾರರನ್ನಾಗಿ ಗೂಗಲ್ ಸೇರಿಸಿಕೊಂಡಿದೆ.

ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿ. ಇದನ್ನು ಆರಂಭಿಸಲು ಭಾಷೆ ಆಯ್ಕೆ ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್ ಹಿಂದಿ, ಬೆಂಗಾಲಿ, ಗುಜರಾತಿ ಮತ್ತು ಕನ್ನಡ ಭಾಷೆಗಳನ್ನು ಬೆಂಬಲಿಸುತ್ತದೆ.

[ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

ಬ್ಯಾಂಕ್ ಖಾತೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಿ. ನೋಟಿಫಿಕೇಷನ್, ಖಾತೆಯ ಪರಿಶೀಲನೆಗಾಗಿ ನೀವು ಗೂಗಲ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇನ್-ಆಪ್ ಲಾಕ್ ಗೆ ಗೂಗಲ್ ತೇಜ್ ಅಪ್ಲಿಕೇಷನ್ ಸಪೋರ್ಟ್ ಮಾಡುತ್ತದೆ. ಹೊಸ ಲಾಕ್ ಅನ್ನೂ ಕೂಡಾ ಗೂಗಲ್ ತೇಜ್ ಗಾಗಿ ಕ್ರಿಯೇಟ್ ಮಾಡಬಹುದು.

ಯುಪಿಐ ಮೂಲಕ ಆಯ್ಕೆ ಮಾಡಿದ ಬ್ಯಾಂಕ್ ಖಾತೆಯೊಂದಿಗೆ ಪಾವತಿ ಮಾಡಬೇಕೆಂದರೆ ಹೋಮ್ ಸ್ಕ್ರೀನ್ ಗೆ ಹೋಗಬೇಕಾಗುತ್ತದೆ. ಆಕ್ಸಿಸ್ ಬ್ಯಾಂಕ್, ಹೆಚ್.ಡಿ.ಎಫ್.ಸಿ, ಐಸಿಐಸಿಐ, ಎಸ್.ಬಿ.ಐ ನಂತ ಬ್ಯಾಂಕುಗಳೊಂದಿಗೆ ಲಿಂಕ್ ಆಗಿದೆ. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಗೂ ಇದು ಸಪೋರ್ಟ್ ಮಾಡುತ್ತದೆ. ನಿಮ್ಮ ಖಾತೆಯನ್ನು ಲಿಂಕ್ ಮಾಡಲು ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆ, ಐಎಫ್ಎಸ್ಸಿ ಕೋಡ್ ಮುಂತಾದ ಬೇಸಿಕ್ ವಿವರಗಳು ನೀಡಿದರೆ ಸಾಕು.

Get Latest updates on WhatsApp. Send ‘Add Me’ to 8550851559

Loading...