ಶೀಘ್ರದಲ್ಲಿಯೇ ಗೂಗಲ್ ಪೇಮೆಂಟ್ ಸರ್ವೀಸ್

ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್(ಉಪಿಐ) ಪೇಮೆಂಟ್ ಸೇವೆ ನೀಡಲು ಅಗತ್ಯವಾದ ಪರೀಕ್ಷೆಯನ್ನು ಟೆಕ್ ದಿಗ್ಗಜ ಗೂಗಲ್ ಪೂರ್ಣಗೊಳಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ) ಹೇಳಿದೆ. ಸದ್ಯ ಪೇಮೆಂಟ್ ಸೇವೆಗಳನ್ನು ಔಪಚಾರಿಕವಾಗಿ ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಗಾಗಿ ಕಾಯುತ್ತಿದೆ ಎಂದು ಎನ್.ಪಿ.ಸಿ.ಐ ಮೇನೇಜಿಂಗ್ ಡೈರೆಕ್ಟರ್ ಹೇಳಿದ್ದಾರೆ.

ಮತ್ತೊಂದು ಕಡೆ ಯುಪಿಐ ಪೇಮೆಂಟ್ ಸೇವೆಗಳನ್ನು ಆರಂಭಿಸಲು ಫೇಸ್ಬುಕ್, ವಾಟ್ಸಾಪ್ ಸಹ ಎನ್.ಪಿ.ಸಿ.ಐ ನೊಂದಿಗೆ ಚರ್ಚೆ ನಡೆಸುತ್ತಿವೆ. ಸಾಧ್ಯವಾದಷ್ಟು ಬೇಗ ಈ ಮೂರು ಸಂಸ್ಥೆಗಳ ಪೇಮೆಂಟ್ ಸೇವೆಗಳು ಲಭ್ಯವಾಗಲಿವೆ ಎನ್ನುತ್ತಿದ್ದಾರೆ.