ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ – News Mirchi

ಉಪರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ

ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿದ್ದ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು, ಇದೀಗ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಗೋಪಾಲಕೃಷ್ಣ ಗಾಂಧಿಯವರನ್ನು ಆಯ್ಕೆ ಮಾಡಿದೆ.

ಬಿಜೆಪಿ ವಿರುದ್ಧ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ 18 ಪ್ರತಿಪಕ್ಷಗಳು ಮಂಗಳವಾರ ಸಭೆ ಸೇರಿದ್ದವು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಟಿಎಂಸಿ ಯ ಡೆರೆಕ್ ಓಬ್ರಿಯನ್, ಸಿಪಿಎಂ ನ ಸೀತಾರಾಮ್ ಯೆಚೂರಿ, ಸಮಾಜವಾದಿ ಪಕ್ಷದ ನರೇಶ್ ಅಗರವಾಲ್, ನ್ಯಾಷನಲ್ ಕಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ, ಜೆಡಿಎಸ್ ನ ದೇವೇಗೌಡ, ಬಿಎಸ್ಪಿ ಯಿಂದ ಸತೀಶ್ ಚಂದ್ರ ಮಿಶ್ರ, ಆರ್.ಎಲ್.ಡಿ ಯಿಂದ ಅಜಿತ್ ಸಿಂಗ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಅಭ್ಯರ್ಥಿ ವಿಷಯದಲ್ಲಿ ಪ್ರತಿಪಕ್ಷಗಳಿಂದ ದೂರವುಳಿದಿದ್ದ ಜೆಡಿಯು ಪಕ್ಷದ ಮುಖಂಡ ಶರದ್ ಯಾದವ್ ಪಾಲ್ಗೊಂಡಿದ್ದು ವಿಶೇಷ.

ಹೌದು ಚೀನಾ ರಾಯಭಾರಿಯೊಂದಿಗೆ ರಾಹುಲ್ ಭೇಟಿ ನಿಜ, ಮಾತು ಬದಲಿಸಿದ ಕಾಂಗ್ರೆಸ್

ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್ 5 ರಂದು ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಯುತ್ತದೆ. ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ 22 ಏಪ್ರಿಲ್ 1945 ರಂದು ಜನಿಸಿದ್ದು, ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾಗಿದ್ದಾರೆ.

ಸಮಾಧಿಗಳಿಂದ ಶವಗಳನ್ನು ಹೊರತೆಗೆದ ಪ್ರಕರಣ, ತೀಸ್ತಾಗೆ ಸುಪ್ರೀಂ ನಲ್ಲಿ ಹಿನ್ನಡೆ

1985 ರಿಂದ 1987 ರವರೆಗೆ ಉಪರಾಷ್ಟ್ರಪತಿಯವರ ಕಾರ್ಯದರ್ಶಿಯಾಗಿ, 1987 ರಿಂದ 1992 ರವರೆಗೆ ರಾಷ್ಟ್ರಪತಿಗಳಿಗೆ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2004 ರಿಂದ 2009 ರವರೆಗೆ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

Loading...