ವೆಂಕಯ್ಯನಾಯ್ಡು ಅವರನ್ನು ಅಭಿನಂದಿಸಿದ ಗೋಪಾಲಕೃಷ್ಣ ಗಾಂಧಿ, ಸೋನಿಯಾ – News Mirchi

ವೆಂಕಯ್ಯನಾಯ್ಡು ಅವರನ್ನು ಅಭಿನಂದಿಸಿದ ಗೋಪಾಲಕೃಷ್ಣ ಗಾಂಧಿ, ಸೋನಿಯಾ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸೋಲುಂಡ ಪ್ರತಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರು ಗೆದ್ದ ವೆಂಕಯ್ಯನಾಯ್ಡು ಅವರನ್ನು ಅಭಿನಂದಿಸಿದ್ದಾರೆ. ತಮಗೆ ಬಂದ ಮತಗಳು ವಾಕ್ ಸ್ವಾತಂತ್ರ್ಯ ಮತ್ತು ಸ್ವತಂತ್ರ ಚಿಂತನೆಗಳಿಗೆ ಸಾಕ್ಷಿ ಎಂದು ಅವರು ಬಣ್ಣಿಸಿದ್ದಾರೆ. ಬಹುಸಾಂಸ್ಕೃತಿಕ ಮತ್ತು ಜ್ಯಾತ್ಯಾತೀತತೆಯನ್ನು ದೃಢಪಡಿಸುವುದಕ್ಕಾಗಿ ನನಗೆ ಸಂಸದರು ಮತ ಹಾಕಿದ್ದಾರೆ ಎಂದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೂ ವೆಂಕಯ್ಯನಾಯ್ಡುರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ 771 ಮತಗಳ ಪೈಕಿ ವೆಂಕಯ್ಯನಾಯ್ಡು ಅವರು 516 ಮತ ಗಳಿಸಿದರೆ, ಗೋಪಾಲಕೃಷ್ಣ ಗಾಂಧಿಯವರಿಗೆ 244 ಮತಗಳು ಬಂದವು. ಒಟ್ಟು 771 ಮತಗಳಲ್ಲಿ 11 ಮತಗಳು ಅನರ್ಹಗೊಂಡಿರುವಂತಹವು.

Contact for any Electrical Works across Bengaluru

Loading...
error: Content is protected !!