ಈ ದೇಶದಿಂದ ಚಿನ್ನ ಬೆಳ್ಳಿ ಆಮದು ನಿಷೇಧಿಸಿದ ಕೇಂದ್ರ – News Mirchi

ಈ ದೇಶದಿಂದ ಚಿನ್ನ ಬೆಳ್ಳಿ ಆಮದು ನಿಷೇಧಿಸಿದ ಕೇಂದ್ರ

ನವದೆಹಲಿ: ದಕ್ಷಿಣ ಕೊರಿಯಾದಿಂದ ಚಿನ್ನ ಮತ್ತು ಬೆಳ್ಳಿ ಆಮದು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರವು ಚಿನ್ನ ಬೆಳ್ಳಿ ಆಮದಿನ ಮೇಲೆ ನಿಷೇಧ ಹೇರಿದೆ. ಇವುಗಳ ಆಮದನ್ನು ನಿಯಂತ್ರಿತ ಕ್ಯಾಟಗೆರಿಯಲ್ಲಿ ಸೇರಿಸಲಾಗಿದ್ದು, ಚಿನ್ನ ಬೆಳ್ಳಿಯನ್ನು ಇನ್ನು ಮುಂದೆ ಆಮದು ಮಾಡಿಕೊಳ್ಳಬೇಕಾದರೆ ಸರ್ಕಾರಿಂದ ಅನುಮತಿ ಪಡೆಯಬೇಕಾಗಿರುತ್ತದೆ. ನಾಣ್ಯ, ಆಭರಣ ರೂಪದಲ್ಲಿರುವ ಎಲ್ಲಾ ಚಿನ್ನ ಮತ್ತು ಬೆಳ್ಳಿ ವಸ್ತುಗಳಿಗೆ ಇದು ಅನ್ವಯಿಸುತ್ತದೆ. ಜುಲೈ 1 ರಿಂದ ಆಗಸ್ಟ್ 21 ರ ನಡುವೆ ದಕ್ಷಿಣ ಕೊರಿಯಾದಿಂದ ಆಮದಾದ ಚಿನ್ನ ಬೆಳ್ಳಿಯ ಮೌಲ್ಯ ಸುಮಾರು 1 ಬಿಲಿಯನ್ ಡಾಲರ್. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಈ ಕ್ರಮ ಕೈಗೊಂಡಿದೆ. [ಇದನ್ನೂ ಓದಿ: ಪ್ರೀತಿಸಲಿಲ್ಲವೆಂದು 15 ವರ್ಷದ ಬಾಲಕಿಯ ಕೈ ಕತ್ತರಿಸಿದ ಪಾಪಿ]

ದಕ್ಷಿಣ ಕೊರಿಯಾ ಮತ್ತು ಭಾರತದ ನಡುವೆ ಬೇಸಿಕ್ ಕಸ್ಟಮ್ಸ್ ಸುಂಕವಿಲ್ಲದೆ ಮುಕ್ತ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಚಿನ್ನದ ಉತ್ಪನ್ನಗಳ ಮೆಲೆ ಶೇ.10 ಕಸ್ಟಮ್ಸ್ ಡ್ಯೂಟಿ ಇದೆ. ಚೀನಾ ನಂತರ ಅತಿ ಹೆಚ್ಚು ಚಿನ್ನ ಬಳಸುತ್ತಿರುವ ಭಾರತ, ಸದ್ಯ 400ಕ್ಕೂ ಹೆಚ್ಚು ಉತ್ಪನ್ನಗಳನ್ನು ನಿಯಂತ್ರಿತ ಆಮದು ವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ.

Loading...