ಮಾರುಕಟ್ಟೆಗೆ ಬರಲಿದೆ ಪ್ಲಾಸ್ಟಿಕ್ ನೋಟು

ಹಳೆಯ ನೋಟು ರದ್ದಾದ ನಂತರ ಹೊಸ ನೋಟುಗಳನ್ನು ಮುದ್ರಿಸುತ್ತಿರುವ ಕೇಂದ್ರ ಸರ್ಕಾರ, ಮತ್ತೊಂದು ಮಹತ್ವದ ಪ್ರಕಟಣೆ ನೀಡಿದೆ. ಪೇಪರ್ ಕರೆನ್ಸಿ ಬದಲು ಪ್ಲಾಸ್ಟಿಕ್ ನೋಟುಗಳನ್ನು ಪ್ರಿಂಟ್ ಮಾಡಬೇಕೆಂದು ತೀರ್ಮಾನಿಸಿರುವುದಾಗಿ ಹೇಳಿದೆ. ಇದಕ್ಕೆ ಬೇಕಾದ ವಸ್ತುಗಳ ಸಂಗ್ರಹವನ್ನೂ ಆರಂಭಿಸಲಾಗಿದೆ ಎಂದು ಕೇಂದ್ರ ಹೇಳಿದೆ. ಈ ವಿಷಯವನ್ನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಹಿಂದಿನಿಂದಲೇ ಪ್ಲಾಸ್ಟಿಕ್ ಕರೆನ್ಸಿ ಪ್ರಿಂಟ್ ಮಾಡಲು ಚಿಂತನೆ ನಡೆಸುತ್ತಿದ್ದು, ಇದಕ್ಕಾಗಿ ಕ್ಷೇತ್ರಮಟ್ಟದ ಪರಿಶೀಲನೆ ನಡೆಸಿದೆ ಎಂದು ಅರ್ಜುನ್ ರಾಮ್ ಮೇಘ್ವಾಲ್ ಹೇಳಿದರು. 2014 ರಲ್ಲೇ ಸರ್ಕಾರ ಈ ವಿಷಯವನ್ನು ಸಂಸತ್ತಿಗೆ ತಿಳಿಸಿತ್ತು. ರೂ. 10 ಮೌಲ್ಯದ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಪ್ರಿಂಟ್ ಮಾಡಲಾಗುವುದು ಎಂದರು.

ಪೇಪರ್ ಕರೆನ್ಸಿಗೆ ಹೋಲಿಸಿದರೆ ಪ್ಲಾಸ್ಟಿಕ್ ಕರೆನ್ಸಿ ತುಂಬಾ ಸುರಕ್ಷಿತ, ಇದರ ಬಾಳಿಕೆ ಕನಿಷ್ಟ 5 ವರ್ಷ ಇರುತ್ತದೆ, ಇವುಗಳನ್ನು ನಕಲು ಮಾಡುವುದು ಸಾಧ್ಯವಿಲ್ಲ. ನಕಲಿ ನೋಟು ಹಾವಳಿ ತಡೆಯಲು ಆಸ್ಟ್ರೇಲಿಯಾ ಮೊದಲು ಈ ಪ್ಲಾಸ್ಟಿಕ್ ಕರೆನ್ಸಿ ಮುದ್ರಿಸಿತ್ತು.

Loading...

Leave a Reply

Your email address will not be published.

error: Content is protected !!