ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಬಂದ್, ಹೊಸ ನಿಯಮಗಳು ಹೀಗಿವೆ…

ಬ್ಯಾಂಕುಗಳಲ್ಲಿ ನೋಟು ಬದಲಾಯಿಸಿ ಕೊಳ್ಳುವುದಕ್ಕೆ ನೀಡಿದ್ದ ಅವಧಿಯನ್ನು ಈ ಹಿಂದೆ ಪ್ರಕಟಿಸಿದಂತೆ ಕೇಂದ್ರ ಸರ್ಕಾರ ಬುಧವಾರಕ್ಕೆ ಅಂತ್ಯಗೊಳಿಸಿದೆ. ಈಗಾಗಲೇ ನೋಟು ಬದಲಾವಣೆಗಾಗಿ ಬ್ಯಾಂಕುಗಳ ಬಳಿ ಸಾಲುಗಟ್ಟಿ ನಿಲ್ಲುವುದು ಕಡಿಮೆಯಾಗಿದ್ದು, ಇದುವರೆಗೂ ಬ್ಯಾಂಕ್ ಖಾತೆ ಇಲ್ಲದವರು ಖಾತೆ ತೆರೆದು ತಮ್ಮ ಬಳಿ ಇರುವ ಹಳೆಯ ನೋಟು ಡಿಪಾಸಿಟ್ ಮಾಡಿಕೊಳ್ಳಬಹುದು ಎಂದು ಕೇಂದ್ರ ಭಾವಿಸಿದೆ.

ವ್ಯಾಸ ರಚಿತ ಮಹಾಭಾರತ

ಇನ್ನು ಹಳೆಯ 500, 1000 ರ ನೋಟುಗಳ ಚಲಾವಣೆಯನ್ನು ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ. ನೋಟು ಚಲಾವಣೆಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಸಡಿಲಿಸಿ, ಮತ್ತೆ ಕೆಲ ಹೊಸ ನಿಯಮಗಳನ್ನು ಸೇರಿಸಿದ್ದಾರೆ.

ಎಲ್ಲೆಲ್ಲಿ ಹಳೆಯ ನೋಟು ಚಲಾವಣೆ ಮಾಡಬಹುದು?

ಕೇಂದ್ರ ಮತ್ತು ರಾಜ್ಯ ಸರ್ಕಾರಿ, ನಗರಸಭೆ, ಸ್ಥಳೀಯ ಸಂಸ್ಥೆಗಳ ಮಾಲೀಕತ್ವದ ಶಾಲೆಗಳಲ್ಲಿ ಶಾಲಾ ಶುಲ್ಕವನ್ನು ರೂ. 2 ಸಾವಿರವರೆಗೂ ರೂ.500 ನೋಟು ನೀಡಿ ಪಾವತಿಸಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಾಲೇಜುಗಳ ಶುಲ್ಕವನ್ನು ಹಳೆಯ ನೋಟುಗಳಲ್ಲಿ ಪಾವತಿಸಬಹುದು.

ರೂ. 500 ರವರೆಗೆ ಪ್ರೀಪೇಯ್ಡ್ ಮೊಬೈಲ್ ರೀಚಾರ್ಜ್ ಮಾಡಿಸಬಹುದು.

ಒಮ್ಮೆ ರೂ. 5 ಸಾವಿರ ಮೌಲ್ಯದ ವಸ್ತುಗಳನ್ನು ಸಹಕಾರ ಮಳಿಗೆಗಳಿಂದ ಖರೀದಿಸಬಹುದು.

ಕುಡಿಯುವ ನೀರು, ವಿದ್ಯುತ್ ಬಿಲ್ಲುಗಳ ಹಳೆಯ ಬಾಕಿ ಮತ್ತು ಈಗಿನ ಬಿಲ್ಲುಗಳನ್ನು ಪಾವತಿಸಬಹುದು. ಇದು ಕೇವಲ ಆಯಾ ವ್ಯಕ್ತಿಗಳ ಮನೆಗಳಿಗೆ ಮಾತ್ರ ಅನ್ವಯ.

ಟೋಲ್ ಪ್ಲಾಜಾಗಳ ಬಳಿ ಡಿಸೆಂಬರ್ 2 ರವರೆಗೆ ಟೋಲ್ ಶುಲ್ಕ ಪಾವತಿಸುವಂತಿಲ್ಲ. ಡಿಸೆಂಬರ್ 3 ರಿಂದ 15 ರವರೆಗೆ 500 ರ ನೋಟು ಬಳಸಿ ಪಾವತಿಸಬಹುದು.

ವಿದೇಶೀಯರು ವಾರಕ್ಕೆ ರೂ. 5000 ದವರೆಗೂ ವಿದೇಶೀ ಕರೆನ್ಸಿಯನ್ನು ಬದಲಿಸಿಕೊಳ್ಳಲು ಅನುಮತಿ. ಅದರ ವಿವರಗಳನ್ನು ಅವರ ಪಾಸ್ಪೋರ್ಟ್ ಗಳಲ್ಲಿ ದಾಖಲಾಗುತ್ತದೆ.

Related Post

error: Content is protected !!