ಕಪ್ಪು ಹಣ ಕುರಿತು ಬಂದಿವೆ 4 ಸಾವಿರ ಇಮೇಲ್‌ಗಳು – News Mirchi

ಕಪ್ಪು ಹಣ ಕುರಿತು ಬಂದಿವೆ 4 ಸಾವಿರ ಇಮೇಲ್‌ಗಳು

ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ, ಕಪ್ಪು ಹಣವುಳ್ಳವರ ಬಗ್ಗೆ ಮಾಹಿತಿಯಿದ್ದರೆ ಹಂಚಿಕೊಳ್ಳಲು blackmoneyinfo@incometax.gov.in ಇಮೇಲ್ ವಿಳಾಸವನ್ನು ಶುಕ್ರವಾರ ಪ್ರಕಟಿಸಿತ್ತು. ಇದಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಈ ಇಮೇಲ್ ಖಾತೆಯ ಇನ್ಬಾಕ್ಸ್ 4,000 ಕಪ್ಪು ಹಣಕ್ಕೆ ಸಂಬಂಧಿಸಿದ ಸಂದೇಶಗಳಿಂದ ತುಂಬಿ ಹೋಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನು ಹೊರತು ಪಡಿಸಿಯೂ ವಿತ್ತ ಸಚಿವಾಲಯಕ್ಕೆ ಪ್ರವಾಹೋಪಾದಿಯಲ್ಲಿ ಕುರಿತು, ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿರುವ ಹಣದ ಕುರಿತು ಮಾಹಿತಿ ಹರಿದು ಬರುತ್ತಿದೆ‌. , ತನಿಖಾ ತಂಡಗಳು ಪ್ರತಿದಿನ ದಾಳಿಗಳನ್ನು ನಡೆಸುತ್ತಿದ್ದಾರೆ.

ಬ್ಯಾಂಕುಗಳಲ್ಲಿ ಜಮೆಯಾಗುತ್ತಿರುವ ಹಣದ ಬಗ್ಗೆ ವರದಿಗಳು ಪ್ರತಿದಿನ ಕೈಸೇರುತ್ತಿದ್ದು, ಆದಾಯ ತೆರಿಗೆ ಯಶಸ್ವಿ ದಾಳಿಗಳಿಗೆ ಈ ವರದಿಗಳು ನೆರವಾಗುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಸರ್ಕಾರಕ್ಕೆ ಜನ್ ಧನ್ ಖಾತೆಗಳು ಮತ್ತು ನಗರದ ಸಹಕಾರಿ ಬ್ಯಾಂಕು ಖಾತೆಗಳಲ್ಲಿ ಆಗುತ್ತಿರುವ ಡಿಪಾಸಿಟ್‌ಗಳು, ಕ್ರೆಡಿಟ್ ಕಾರ್ಡ್ ಪಾವತಿಗಳು, ಸಾಲ ಮರುಪಾವತಿಗಳು ಮುಂತಾದವುಗಳ ಬಗ್ಗೆ ಮಾಹಿತಿ ಹರಿದು ಬರುತ್ತಿದೆ. ಇಮೇಲ್ ಮೂಲಕ ಬರುತ್ತಿರುವ ಮಾಹಿತಿಗಳು ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ನಡೆಸುತ್ತಿರುವ ಹೋರಾಟಕ್ಕೆ ತುಂಬಾ ಸಹಕಾರಿಯಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache