ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಇದುವರೆಗೂ ನೀಡಿದ್ದು 9,940 ಕೋಟಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಇದುವರೆಗೂ ಎಲ್ಲಾ ರಾಜ್ಯಗಳಿಗೂ ಸೇರಿ ರೂ.9,940 ಕೋಟಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯ ಭಾಗವಾಗಿ ಮಹಾರಾಷ್ಟ್ರದಲ್ಲಿನ 8 ನಗರಗಳಿಗೆ ರೂ.1,378 ಕೋಟಿ ನೀಡಿರುವುದಾಗಿ ಹೇಳಿದೆ. ಮಧ್ಯಪ್ರದೇಶದ 7 ನಗರಗಳಿಗೆ ರೂ.984 ಕೋಟಿ ಬಿಟುಗಡೆ ಮಾಡಿರುವುದಾಗಿ ಹೇಳಿದೆ.

ರಿಯಾಲಿಟಿ ಶೋ ಆಡಿಷನ್ ನಲ್ಲಿ ಅಶ್ಲೀಲ ಪ್ರಶ್ನೆಗಳು: ಸುಳ್ಳೆಂದ ಇತರೆ ವಿದ್ಯಾರ್ಥನಿಯರು

ಆಂಧ್ರಪ್ರದೇಶದ ನಾಲ್ಕು ನಗರಗಳಿಗೆ ರೂ.588 ಕೋಟಿ, ತಮಿಳುನಾಡಿನ 11 ನಗರಗಳಿಗೆ 848 ಕೋಟಿ, ಕರ್ನಾಟಕದ 7 ನಗರಗಳಿಗೆ ಇದುವರೆಗೂ ರೂ.836 ಕೋಟಿ, ರಾಜಸ್ಥಾನದ ನಾಲ್ಕು ನಗರಗಳಿಗೆ ಇದುವರೆಗೂ ರೂ.784 ಕೋಟಿ, ಉತ್ತರ ಪ್ರದೇಶದ 10 ನಗರಗಳಿಗೆ ರೂ.547 ಕೋಟಿ, ಗುಜರಾತ್ ನ ಆರು ನಗರಗಳಿಗೆ ರೂ.509 ಕೋಟಿ ಬಿಡುಗಡೆ ಮಾಡಿರುವುದಾಗಿ ಅಂಕಿ ಅಂಶಗಳು ಹೇಳುತ್ತಿವೆ.

Get Latest updates on WhatsApp. Send ‘Subscribe’ to 8550851559