ಜಿ.ಎಸ್.ಟಿ ಸಂದೇಹಗಳಿಗೆ ‘ವಿಶೇಷ ವಾರ್ ರೂಮ್” – News Mirchi

ಜಿ.ಎಸ್.ಟಿ ಸಂದೇಹಗಳಿಗೆ ‘ವಿಶೇಷ ವಾರ್ ರೂಮ್”

ಹೊಸ ತೆರಿಗೆ ಸುಧಾರಣಾ ಪದ್ದತಿಯಾದ ಜಿ.ಎಸ್.ಟಿ ಭಾರತಾದ್ಯಂತ ಜಾರಿಗೆ ಬರಲು ಇನ್ನು ಮೂರೇ ದಿನ ಉಳಿದಿದೆ. ಜುಲೈ 1 ರಿಂದ ಜಾರಿಗೆ ಬರಲಿರುವ ಈ ಹೊಸ ತೆರಿಗೆ ಪದ್ದಿಯ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ಕೆಲವು ಅನುಮಾನಗಳು ಉದ್ಭವವಾಗುವುದು ಸಹಜ. ಇಂತಹ ಸಂದೇಹಗಳನ್ನು ಬಗೆಹರಿಸಲು ಸರ್ಕಾರವೂ ಕೂಡ ಸಿದ್ಧವಾಗಿ ಕೂತಿದೆ.

ಜಿ.ಎಸ್.ಟಿ ಕುರಿತ ಸಂದೇಹಗಳನ್ನು ಬಗೆಹರಿಸಲು ಸರ್ಕಾರ “ಸ್ಪೆಷಲ್ ವಾರ್ ರೂಮ್” ಅನ್ನು ರಚಿಸಿದೆ. ಒಂದು ವೇಳೆ ಜಿ.ಎಸ್.ಟಿ ಜಾರಿಯಲ್ಲಿ ಯಾವುದೇ ಸಂದೇಹಗಳು ಉದ್ಭವವಾದರೂ ಕೂಡಲೇ ಈ ವಾರ್ ರೂಮ್ ಬಗೆಹರಿಸುತ್ತದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಈ ವಾರ್ ರೂಮ್ ಕೆಲಸ ನಿರ್ವಹಿಸುತ್ತದೆ. ಒಂದೇ ಬಾರಿ ನೂರಾರು ಫೋನ್ ಗಳು, ಕಂಪ್ಯೂಟರ್ ಸಿಸ್ಟಮ್ಸ್ ಹೊಂದಿರುವಂತೆ ಈ ವಾರ್ ರೂಮನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು ಕೇಳುವ ಪ್ರಶ್ನೆಗಳಿಗೆ ಈ ವಾರ್ ರೂಮ್ ಕೂಡಲೇ ಉತ್ತರಿಸುತ್ತದೆ. ಜಿ.ಎಸ್.ಟಿ ಕುರಿತು ಯಾವುದೇ ಗೊಂದಲವಿಲ್ಲದೆ ನೋಡಿಕೊಳ್ಳುವುದು ಇದರ ರಚನೆಯ ಉದ್ದೇಶ. ಇಂದಿನಿಂದಲೇ ವ್ಯಾಪಾರಿಗಳು ಇದರ ಪ್ರಾಯೋಗಿಕ ಫೈಲಿಂಗ್ ಮಾಡಬಹುದು.

Loading...