ಸ್ವಿಸ್ ನಲ್ಲಿನ ಕಪ್ಪು ಹಣದ ವಿವರಗಳಿಗೆ ಮುಂದುವರೆದ ಪ್ರಯತ್ನ – News Mirchi

ಸ್ವಿಸ್ ನಲ್ಲಿನ ಕಪ್ಪು ಹಣದ ವಿವರಗಳಿಗೆ ಮುಂದುವರೆದ ಪ್ರಯತ್ನ

ನವದೆಹಲಿ: ಸ್ವಿಟ್ಜರ್ಲೆಂಡ್ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ಪತ್ತೆ ಹಚ್ಚಲು ಭಾರತ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಕಪ್ಪು ಹಣ ಹೊಂದಿರುವವರ ಖಾತೆಗಳ ವಿವರಗಳನ್ನು ನೀಡಬೇಕೆಂದು ಜೂನ್ ನಿಂದ ಇಲ್ಲಿಯವರೆಗೂ ಸುಮಾರು 20 ಮನವಿಗಳನ್ನು ಸ್ವಿಟ್ಜರ್ಲೆಂಡ್ ಗೆ ಭಾರತ ಸಲ್ಲಿಸಿದೆ.

ಸ್ವಿಸ್ ಬ್ಯಾಂಕುಗಳಲ್ಲಿ ಹಣ ಇಟ್ಟಿದ್ದಾರೆ ಎಂಬ ಸಂದೇಹವುಳ್ಳವರ ಹೆಸರುಗಳ ಪಟ್ಟಿ ತಯಾರಿಸಿ, ಅವರ ಖಾತೆಗಳ ವಿವರ ನೀಡಬೇಕೆಂದು ಸ್ವಿಟ್ಜರ್ಲೆಂಡ್ ಗೆ ಮತ್ತೊಮ್ಮೆ ಮನವಿ ಮಾಡಿದೆ.

2018 ರ ಸೆಪ್ಟೆಂಬರ್ ನಿಂದ ಭಾರತೀಯ ಸ್ವಿಸ್ ಖಾತೆಗಳ ವಿವರಗಳು ಆಟೋಮ್ಯಾಟಿಕ್ ಆಗಿ ಪಡೆಯಲು ಅನುಕೂಲವಾಗುವಂತೆ ಸ್ವಿಟ್ಜರ್ಲೆಂಡ್ ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣ ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ.

Loading...

Leave a Reply

Your email address will not be published.