ಹೊಸ 1000 ರೂಪಾಯಿ ನೋಟಿನ ಕುರಿತು ಕೇಂದ್ರದ ಸ್ಪಷ್ಟನೆ – News Mirchi

ಹೊಸ 1000 ರೂಪಾಯಿ ನೋಟಿನ ಕುರಿತು ಕೇಂದ್ರದ ಸ್ಪಷ್ಟನೆ

ಮತ್ತೆ ರೂ.1000 ಮೌಲ್ಯದ ನೋಟನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹರಿದಾಡುತ್ತಿರುವ ಸುದ್ದಿಗಳ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ರೂ.1000 ಮೌಲ್ಯದ ನೋಟು ಪುನಃ ಬಿಡುಗಡೆ ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳಿಂದ ಮತ್ತೆ 1000 ರ ನೋಟು ಬಿಡುಗಡೆಯಾಗಲಿದೆ ಎಂದು ಹರಿದಾಡುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ ಅವರು ಟ್ವೀಟ್ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. [ಇದನ್ನೂ ಓದಿ: ಅವಳಿಗಳನ್ನು ಬೇರ್ಪಡಿಸುವ ಅಪರೂಪದ ಶಸ್ತ್ರ ಚಿಕಿತ್ಸೆ ಆರಂಭ]

ನವೆಂಬರ್ 8 ರಂದು ಕೇಂದ್ರ ಸರ್ಕಾರ ರೂ.500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಹೊಸ ವಿನ್ಯಾಸದ ರೂ.2000 ಮತ್ತು ರೂ.500 ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಚಲಾವಣೆಗೆ ತಂದಿತ್ತು. ನಂತರ ಚಿಲ್ಲರೆ ಸಮಸ್ಯೆ ನೀಗಿಸಲು ಇತ್ತೀಚೆಗಷ್ಟೇ ಹೊಸ ವಿನ್ಯಾಸದ ರೂ.50 ಮತ್ತು ರೂ.200 ರ ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ 1000 ರ ನೋಟೂ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.

Loading...