ಎನ್‌ಡಿಟಿವಿ ಪ್ರಸಾರ ಸ್ಥಗಿತ

ಪ್ರಮುಖ ರಾಷ್ಟ್ರೀಯ ಸುದ್ದಿ ವಾಹಿನಿ ಪ್ರಸಾರಗಳಿಗೆ ಕೇಂದ್ರ ಸರ್ಕಾರ ಒಂದು ದಿನ ಸ್ಥಗಿತಗೊಳಿಸಿ ಆದೇಶ ಜಾರಿ ಮಾಡಿದೆ. ಪ್ರಸಾರಗಳ ನಿಯಮಗಳನ್ನು ಉಲ್ಲಂಘಿಸಿದ್ದೇ ಇದಕ್ಕೆ ಕಾರಣವೆನ್ನಲಾಗಿದೆ. ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಪ್ರೋಗ್ರಾಂ ಕೋಡ್ ಉಲ್ಲಂಘಿಸಿ ಪ್ರಮುಖ ಪ್ರದೇಶಗಳನ್ನು ಪ್ರಸಾರ ಮಾಡಿತ್ತು. ಆಗ ವೈಖರಿಗೆ ವಿರೋಧ ಪಡಿಸಿ, ಉಗ್ರರಿಗೆ ಅನುಕೂಲವಾಗುವಂತೆ ಪ್ರಮುಖ ಪ್ರದೇಶಗಳ ಮಾಹಿತಿ ಪ್ರಸಾರ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ಜಾರಿ ಮಾಡಿದ ಕೇಂದ್ರ ಸರ್ಕಾರ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವುದಾಗಿ ಹೇಳಿದೆ.

ದಾಳಿಯನ್ನು ನೇರ ಪ್ರಸಾರ ಮಾಡುವ ಮೂಲಕ ಸರ್ಕಾರ ಕೈಗೊಳ್ಳುವ ಕ್ರಮಗಳ ವಿವರಗಳನ್ನು ಪ್ರಸಾರ ಮಾಡಿದೆ ಎಂದು ಸಚಿವರ ಸಮಿತಿ ತೀರ್ಮಾನಕ್ಕೆ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ಮಧ್ಯಾಹ್ನ ಒಂದು ಗಂಟೆಯಿಂದ ನವೆಂಬರ್ 10 ರ ಮಧ್ಯಾಹ್ನ1 ಗಂಟೆಯವರೆಗೂ ಚಾನೆಲ್ ಪ್ರಸಾರ ಸ್ಥಗಿತಗೊಳಿಸಬೇಕೆಂದು ಎನ್ಡಿಟಿವಿಗೆ ಕೇಂದ್ರ ಸೂಚಿಸಿದೆ.

ಆದರೆ ಇದುವರೆಗೂ ಮೂಲಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಏರ್‌ಬೇಸ್ ನಲ್ಲಿ ವಿಮಾನ ನೆಲೆಗಳು, ಯುದ್ಧ ವಿಮಾನಗಳು, ರಾಕೆಟ್ ಲಾಂಚರ್ ಗಳು, ಹೆಲಿಕಾಪ್ಟರ್, ಪೆಟ್ರೋಲ್ ಟ್ಯಾಂಕ್ ಮುಂತಾದವುಗಳನ್ನು ಪ್ರಸಾರ ಮಾಡಿತ್ತು.

Related News

loading...
error: Content is protected !!