ರಾಗಿಗೆ ಬೆಂಬಲ ಬೆಲೆ : ಆತುರಪಟ್ಟು ಕಡಿಮೆ ಬೆಲೆಗೆ ಮಾರಬೇಡಿ |News Mirchi

ರಾಗಿಗೆ ಬೆಂಬಲ ಬೆಲೆ : ಆತುರಪಟ್ಟು ಕಡಿಮೆ ಬೆಲೆಗೆ ಮಾರಬೇಡಿ

ಮಾರುಕಟ್ಟೆಯಲ್ಲಿ ರಾಗಿ ಬೆಲೆ ಇಳಿಕೆಯಿಂದಾಗಿ ಗಾಬರಿಗೊಂಡು ರೈತರು ಆತುರದಿಂದ ಸಿಕ್ಕಷ್ಟು ಬೆಲೆಗೆ ಮಾರುವುದು ಬೇಡ, ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಮಾಡುವವರೆಗೆ ರೈತರು ಕಾಯುವುದು ಒಳ್ಳೆಯದೆಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಕ್ವಿಟಾಲ್ ರಾಗಿಗೆ ರೂ. 1600 ರಿಂದ ರೂ.1700 ವರೆಗೆ ಇದೆ. ಕೇಂದ್ರ ಸರ್ಕಾರವು ರೂ.1,900 ಬೆಂಬಲ ನಿಗದಿ ಮಾಡಿದ್ದು, ರಾಜ್ಯ ಸರ್ಕಾರದಿಂದ 400 ರೂಪಾಯಿ ಸೇರಿಸಿ ನೀಡಲಾಗುತ್ತದೆ. ಹೀಗಾಗಿ ರೈತರಿಗೆ ಒಂದು ಕ್ವಿಂಟಾಲ್ ರಾಗಿಗೆ ಒಟ್ಟು ರೂ.2,300 ಸಿಗುತ್ತದೆ ಎಂದು ಹೇಳಿದರು.

ಐಎನ್ಎಸ್ ಕಲ್ವರಿಯನ್ನು ದೇಶಕ್ಕೆ ಅರ್ಪಿಸಿದ ಪ್ರಧಾನಿ

ಬೆಂಬಲ ಬೆಲೆ ನೀಡಿ ಉದ್ದು, ಶೇಂಗಾ, ರಾಗಿ ಖರೀದಿ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ತೊಗರಿ ಮತ್ತು ಮೆಕ್ಕೆ ಜೋಳ ಖರೀದಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಶೇಂಗಾ ಖರೀದಿಗೆ ಸದ್ಯದಲ್ಲೇ 40 ಕೇಂದ್ರಗಳನ್ನು ಆರಂಭಿಸಿ, ಕ್ವಿಂಟಲ್ ಗೆ 4,450 ರೂಪಾಯಿಯಂತೆ ಈ ವರ್ಷದಲ್ಲಿ 47,500 ಟನ್ ಶೇಂಗಾ ಖರೀದಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!