ಕಲ್ಲಡ್ಕ ಶಾಲೆಗೆ ಅನುದಾನ ರದ್ದು: ಪೂಜಾರಿ ಆಕ್ರೋಶ – News Mirchi
We are updating the website...

ಕಲ್ಲಡ್ಕ ಶಾಲೆಗೆ ಅನುದಾನ ರದ್ದು: ಪೂಜಾರಿ ಆಕ್ರೋಶ

ಕಲ್ಲಡ್ಕ ಮತ್ತು ಪುಣಚ ಶಾಲೆಗಳಿಗೆ ಅನುದಾವನ್ನು ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿಯವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಯಾರ ಶಾಲೆ ಎಂಬುದು ಇಲ್ಲಿ ಮುಖ್ಯವಲ್ಲ, ಇದು ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಸೇರಿರಬಹುದು, ಮತ್ಯಾರಿಗೋ ಸೇರಿದ್ದರಿಬಹುದು. ಅನುದಾನ ರದ್ದುಪಡಿಸಿದ್ದು ಮಾತ್ರ ಕ್ರೂರ ನಡುವಳಿಕೆ ಎಂದು ಹೇಳಿದ್ದಾರೆ. ನಾನೂ ಕುದ್ರೋಳಿಯಲ್ಲಿ ಮಕ್ಕಳು ಸೇರಿದಂತೆ ಎಲ್ಲರಿಗೂ ಊಟ ನೀಡುತ್ತಿದ್ದೆ, ಇದು ಎಷ್ಟು ಕಷ್ಟದ ಕೆಲಸವನ್ನೋದೂ ಗೊತ್ತು, ಅದೊಂದು ಪವಿತ್ರ ಸೇವೆ ಎಂದು ಅವರು ಹೇಳಿದರು. [ನಿಮ್ಮನ್ನು ಕೆಳಗಿಳಿಸಲೆಂದೇ ಅಮಿತ್ ಶಾ ಬಂದಿರುವುದು]

ಮಕ್ಕಳಿಗೆ ಊಟ ನೀಡುವ ಕಲ್ಲಡ್ಕ ಪ್ರಭಾಕರ ಭಟ್ ಅವರ ಈ ಪವಿತ್ರ ಸೇವೆಗೆ ಅವರನ್ನು ನಾನು ಪ್ರಶಂಸಿಸುತ್ತೇನೆ ಎಂದು ಪೂಜಾರಿ ಹೇಳಿದರು. ಆ ಶಾಲೆಗಳಿಗೆ ನೀಡಿದ್ದ ಅನುದಾನವನ್ನು ರದ್ದು ಮಾಡಲು ರಮಾನಾಥ ರೈ ಅವರಿಗೇನಾಗಿತ್ತು ಎಂದು ಪ್ರಶ್ನಿಸಿದ ಅವರು, ದೇವರು ಅವರನ್ನು ಕ್ಷಮಿಸುವುದಿಲ್ಲ, ಕೂಡಲೇ ಆದೇಶವನ್ನು ಹಿಂಪಡೆಯಲಿ ಎಂದು ಒತ್ತಾಯಿಸಿದರು.

Contact for any Electrical Works across Bengaluru

Loading...
error: Content is protected !!