ಸಾಂದರ್ಭಿಕ ಚಿತ್ರ

ಆರ್ಥಿಕವಾಗಿ ಹಿಂದುಳಿದ ವಯೋ ವೃದ್ಧರ ನೆರವಿಗೆ ಕೇಂದ್ರ

ನವದೆಹಲಿ: ವಯೋಸಹಜ ಅಂಗವೈಕಲ್ಯದಿಂದ ಬಳಲುತ್ತಿರುವ ವೃದ್ಧರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ವೃದ್ಧರಿಗೆ ಊರುಗೋಲು, ದೃಷ್ಟಿ ದೋಷ ಹೊಂದಿರುವವರಿಗೆ ಕನ್ನಡಕ, ಶ್ರವಣ ದೋಷವುಳ್ಳವರಿಗೆ ಕೇಳಿಸುವ ಉಪಕರಣಗಳು, ದಂತ ಸಮಸ್ಯೆಯುಳ್ಳವರಿಗೆ ಕೃತಕ ಹಲ್ಲು ಮುಂತಾದವುಗಳನ್ನು ನೀಡಲು ಕೇಂದ್ರ ತೀರ್ಮಾನಿಸಿದೆ.

ಆರ್ಥಿಕವಾಗಿ ಹಿಂದುಳಿದ ವೃದ್ಧರನ್ನು ಸಹಜ ಜೀವನಕ್ಕೆ ಮರಳುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಗೆ ಮುಂದಾಗಿದೆ. ವೃದ್ಧರಿಗೆ ನೀಡುವ ಉಪಕರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಾರ್ಡ್ ಪ್ರಮಾಣೀಕೃತವಾಗಿದ್ದು, ಉತ್ತಮ ಗುಣಮಟ್ಟ ಹೊಂದಿರಲಿವೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸೌಲಭ್ಯ ಪಡೆಯುವವರು ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ನೀಡಬೇಕು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದ್ದು, ರಾಜ್ಯ ಸಮನ್ವಯ ಘಟಕಗಳು ಇದರ ಜಾರಿಗಾಗಿ ಕಾರ್ಯ ನಿರ್ವಹಿಸಲಿವೆ.

ಈ ಯೋಜನೆಯ ಲಾಭ ಪಡೆಯುವವರು ಕನಿಷ್ಢ 60 ವರ್ಷದವರಾಗಿರಬೇಕು, ಬಡತನ ರೇಖೆಗಿಂತ ಕೆಳಗಿರುವಂತೆ ಸಂಬಂಧಿಸಿದ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಕನಿಷ್ಟ ಶೇ. 30 ರಷ್ಟು ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

Related News

Loading...

Leave a Reply

Your email address will not be published.

error: Content is protected !!