ಉರ್ದು ಭಾಷಿಕರಿಗೆ 505 ಅಂಗನವಾಡಿ ಕೇಂದ್ರ – News Mirchi

ಉರ್ದು ಭಾಷಿಕರಿಗೆ 505 ಅಂಗನವಾಡಿ ಕೇಂದ್ರ

ಬೆಳಗಾವಿ: ರಾಜ್ಯದಲ್ಲಿ ಉರ್ದು ಭಾಷಿಕರಿಗಾಗಿ 505 ಅಂಗನವಾಡಿ ಕೇಂದ್ರಗಳನ್ನು ತೆರೆಯುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ 1393 ಅಂಗನವಾಡಿಗಳನ್ನು ಮಂಜೂರು ಮಾಡಿದೆ. ಜನಸಂಖ್ಯೆಗೆ ಅನುಗುಣವಾಗಿ ಶೇ. 40 ರಷ್ಟು ಉರ್ದು ಭಾಷಿಕರಿರುವ ಕಡೆ ಅವರಿಗೆ ಅಂಗನವಾಡಿಗಳನ್ನು ತೆರೆಯಲು ಸ್ಥಳ ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು. ಪ್ರಶ್ನೋತ್ತರ ವೇಳೆಯಲ್ಲಿ ತುಮಕೂರಿನ ಶಾಸಕ ರಫೀಕ್ ಅಹಮದ್ ಪ್ರಶ್ನೆಗೆ ಸಚಿವೆ ಈ ಮೇಲಿನಂತೆ ಉತ್ತರಿಸಿದರು.

Loading...

Leave a Reply

Your email address will not be published.