ಬಾಹುಬಲಿ-2 ಚಿತ್ರದ ಗ್ರಾಫಿಕ್ಸ್ ಎಡಿಟರ್ ಬಂಧನ

ಹೈದರಾಬಾದ್: ಬಾಹುಬಲಿ-2 ಗ್ರಾಫಿಕ್ಸ್ ಎಡಿಟರ್ ಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ 9 ನಿಮಿಷಗಳ ಸೀನ್ ಇಂಟರ್ನೆಟ್ ನಲ್ಲಿ ಲೀಕ್ ಆಗಿತ್ತು. ಈ ಕುರಿತು ನಿರ್ಮಾಪಕರು ಸೈಬರ್ ಸೆಲ್ ಗೆ ಕೃಷ್ಣ ವಿರುದ್ಧ ದೂರು ನೀಡಿದ್ದರು.

ಚಿತ್ರ ತಂಡ ಚಿತ್ರದ ಕಥೆ, ಚಿತ್ರಿಕರಣದ ದೃಶ್ಯಗಳು ಎಲ್ಲೂ ಹೊರಗೆ ಬಾರದಂತೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಚಿತ್ರದ ತುಣುಕೊಂದು ಕದ್ದಿರುವುದು ಬೆಳಕಿಗೆ ಬಂದಿದೆ. ಅದೂ ಚಿತ್ರದ ಗ್ರಾಫಿಕ್ಸ್ ಕೆಲಸ ನಿರ್ವಹಿಸುವ ವ್ಯಕ್ತಿಯೇ ಈ ಕೆಲಸ ಮಾಡಿರುವುದು ಗಮನಾರ್ಹ.

ಎಡಿಟಿಂಗ್ ನಡೆಯುತ್ತಿದ್ದ ವೇಳೆ ಚಿತ್ರದ ತುಣುಕೊಂದನ್ನು ಎಡಿಟಿಂಗ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಫೂಟೇಜ್ ಮೂಲಕ ಕದ್ದಿದ್ದಾರೆ ಎಂದು ಚಿತ್ರ ತಂಡ ಜೂಬ್ಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದರು.

Loading...

Leave a Reply

Your email address will not be published.

error: Content is protected !!