ನಾಳೆ ಆಗಸಕ್ಕೆ ಜಿಸ್ಯಾಟ್-17 |News Mirchi

ನಾಳೆ ಆಗಸಕ್ಕೆ ಜಿಸ್ಯಾಟ್-17

ಜಿಸ್ಯಾಟ್-17 ಉಪಗ್ರಹ ಪ್ರಯೋಗಕ್ಕೆ ವೇದಿಕೆ ಸಿದ್ಧಗೊಂಡಿದೆ. ಗುರುವಾರ ಮುಂಜಾನೆ 2:29 ಕ್ಕೆ ಸರಿಯಾಗಿ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಸಹಕಾರದೊಂದಿಗೆ ಫ್ರೆಂಚ್ ನಲ್ಲಿನ ಗಯಾನಾದ ಕೌರೂ ಬಾಹ್ಯಾಕಾಶ ಕೇಂದ್ರದಿಂದ ಇದರ ಪ್ರಯೋಗ ನಡೆಯುತ್ತದೆ. 3,425 ಕೆಜಿ ತೂಕದ ಈ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಬುಧವಾರ ಕೌಂಟ್ ಡೌನ್ ಆರಂಭವಾಗಿದೆ ಎನ್ನಲಾಗಿದೆ. ಏರಿಯನ್-5 ಇಸಿಎ, , ವಿಎ238 ಎಂಬ ರಾಕೆಟ್ ಮುಖಾಂತರ ಇದರ ಪ್ರಯೋಗ ನಡೆಯುತ್ತದೆ. ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಇಸ್ರೋಗೆ ಸಂಬಂಧಿಸಿದ ಮಾಹಿತಿ ಉಪಗ್ರಹಗಳನ್ನು ಕೌರೂ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಕಳುಹಿಸುತ್ತಿರುತ್ತಾರೆ.

ಅದೇ ರೀತಿ ಫ್ರಾನ್ಸ್ ನ ದೂರ ವೀಕ್ಷಣೆಗೆ ಸಂಬಂಧಿಸಿದ ಸಣ್ಣ ಉಪಗ್ರಹಗಳನ್ನು ಇಸ್ರೋ ಪಿಎಸ್ಎಲ್ಎವಿ ಮೂಲಕ ಕಳುಹಿಸುತ್ತದೆ. ಭಾರತಕ್ಕೆ ಟ್ರಾನ್ಸ್ ಪಾಂಡರ್ ಗಳ ಕೊರತೆ ಇರುವುದರಿಂದ ಅವುಗಳ ಕೊರತೆ ನೀಗಿಸಲು ಸತತವಾಗಿ ಸಂವಹನ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ಇದೇ ತಿಂಗಳು 5 ರಂದು 3 ಟನ್ ತೂಕದ ಜಿಸ್ಯಾಟ್-19 ಉಪಗ್ರಹವನ್ನು ಉಡಾಯಿಸಲಾಗಿತ್ತು, ಇದೀಗ ಜಿಸ್ಯಾಟ್-17 ಪ್ರಯೋಗಕ್ಕೆ ಸಿದ್ಧವಾಗಿದೆ.

  • No items.

Loading...
loading...
error: Content is protected !!