ಜವಳಿ ಉತ್ಪನ್ನ, ಟ್ರಾಕ್ಟರ್ ಬಿಡಿಭಾಗಗಳ ತೆರಿಗೆಯಲ್ಲಿ ಇಳಿಕೆ – News Mirchi

ಜವಳಿ ಉತ್ಪನ್ನ, ಟ್ರಾಕ್ಟರ್ ಬಿಡಿಭಾಗಗಳ ತೆರಿಗೆಯಲ್ಲಿ ಇಳಿಕೆ

ಕೇಂದ್ರ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್ಟಿ ಸಮಿತಿಯು ಜವಳಿ ಉದ್ಯಮಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ತೆರಿಗೆ ದರವನ್ನು ಶೇ.18 ರಿಂದ ಶೇ.5ಕ್ಕೆ ಇಳಿಸಿದೆ. ಕಾರ್ಮಿಕ ವಲಯದ ಮೇಲೆ ಹೊಸ ಜಿಎಸ್ಟಿ ದರಗಳು ಪರಿಣಾಮ ಪ್ರತಿಕೂಲ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ.

ಹಾಗೆಯೇ ಟ್ರಾಕ್ಟರ್ ಬಿಡಿ ಭಾಗಗಳ ಮೇಲಿನ ತೆರಿಗೆ ದರದಲ್ಲೂ ಇಳಿಕೆ ಮಾಡಲಾಗಿದೆ. ಕೆಲ ಟ್ರಾಕ್ಟರ್ ಬಿಡಿಭಾಗಗಳ ಮೇಲಿನ ತೆರಿಗೆಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ಟ್ರಾಕ್ಟರ್ ಬಿಡಿಭಾಗಗಳ ಮೇಲಿನ ಹೆಚ್ಚಿನ ತೆರಿಗೆಯಿಂದ ಕೃಷಿ ಕ್ಷೇತ್ರಕ್ಕೆ ಹೊರೆಯಾಗುತ್ತದೆ ಎಂಬ ಕಾರಣ ತೆರಿಗೆ ದರ ಇಳಿಕೆಗೆ ಕಾರಣವಾಗಿದೆ.

Contact for any Electrical Works across Bengaluru

Loading...
error: Content is protected !!