ಜಿ.ಎಸ್.ಟಿ ಯಿಂದ ಈ ವಸ್ತುಗಳು ಅಗ್ಗ |News Mirchi

ಜಿ.ಎಸ್.ಟಿ ಯಿಂದ ಈ ವಸ್ತುಗಳು ಅಗ್ಗ

ಜಿ.ಎಸ್.ಟಿ (ಸರಕು ಸೇವಾ ತೆರಿಗೆ) ಜಾರಿಯಿಂದಾಗಿ ಜುಲೈ 1 ರಿಂದ ಅಡುಗೆ ಅನಿಲ್(ಎಲ್.ಪಿ.ಜಿ), ನೋಟ್ ಪುಸ್ತಕ, ಇನ್ಸುಲಿನ್, ಅಗರಬತ್ತಿ ಮುಂತಾದ ದಿನಬಳಕೆಯ ವಸ್ತುಗಳು ಕಡಿಮೆ ಬೆಲೆಗೆ ದೊರೆಯಲಿವೆ. ಇವುಗಳ ಮೇಲೆ ಇದುವರೆಗೂ ವಿಧಿಸುತ್ತಿದ್ದ ವಿವಿಧ ರೀತಿಯ ತೆರಿಗೆಗಳಿಗಿಂತ ಕಡಿಮೆ ತೆರಿಗೆಯನ್ನು ಜಿ.ಎಸ್.ಟಿ ಮಂಡಳಿ ಅಂತಿಮಗೊಳಿಸಿದೆ.

ಇದಲ್ಲದೆ ತೆರಿಗೆ ಇಳಿಕೆಯಾಗುವ ವಸ್ತುಗಳಲ್ಲಿ ಹಾಲು ಪುಡಿ, ಮೊಸಲು, ಮಜ್ಜಿಗೆ, ಬ್ರಾಂಡ್ ಹೆಸರು ಇಲ್ಲದ ಜೇನು ತುಪ್ಪ, ಡೈರಿ ಉತ್ಪನ್ನಗಳು, ಮಸಾಲಾ ಪದಾರ್ಥಗಳು, ಟೀ, ಗೋಧಿ, ಅಕ್ಕಿ, ಮೈದಾ ಹಿಟ್ಟು, ಕೊಬ್ಬರಿ ಎಣ್ಣೆ, ಪಾಮಾಯಿಲ್, ಸನ್ ಫ್ಲವರ್ ಆಯಿಲ್, ಕಡಲೆಕಾಯಿ ಎಣ್ಣೆ, ಸಕ್ಕರೆ, ಸಕ್ಕರೆಯಿಂದ ಮಾಡಿದ ಸಿಹಿತಿನಿಸುಗಳು, ನೂಡಲ್ಸ್, ಹಣ್ಣು, ತರಕಾರಿ, ಉಪ್ಪಿನಕಾಯಿ, ಇನ್ಸ್ಟಂಟ್ ಫುಡ್ ಮಿಕ್ಸ್, ಮಿನರಲ್ ವಾಟರ್, ಐಸ್, ಸಿಮೆಂಟ್, ಸೀಮೆ ಎಣ್ಣೆ, ಹಲ್ಲಿನ ಪುಡಿ, ಸೋಪು, ಎಕ್ಸ್ ರೇ ಫಿಲ್ಮ್, ಮೆಡಿಕಲ್ ಡಯಾಗ್ನಾಸ್ಟಿಕ್ ಕಿಟ್ ಮುಂತಾದವು. ಹಾಗೆಯೇ ಕಾಟನ್ ಬಟ್ಟೆಗಳು, ರೆಡಿಮೇಡ್ ಬಟ್ಟೆ, ಡ್ರಾಯಿಂಗ್ ಪುಸ್ತಕ, ರೂ.500 ರ ಒಳಗಿರುವ ಪಾದರಕ್ಷೆಗಳು, ಹೆಲ್ಮೆಟ್, ಎಲ್ಪಿಜಿ ಸ್ಟೌವ್, ಕನ್ನಡಕಗಳ ಮೇಲಿನ ತೆರಿಗೆಯೂ ಕಡಿಮೆಯಾಗಲಿದೆ.

Loading...
loading...
error: Content is protected !!