ಜಿ.ಎಸ್.ಟಿ ಜಾರಿಗೆ ಬರುತ್ತಿದ್ದಂತೆ, ಐಫೋನ್ ಬೆಲೆಗಳಲ್ಲಿ ಕಡಿತ |News Mirchi

ಜಿ.ಎಸ್.ಟಿ ಜಾರಿಗೆ ಬರುತ್ತಿದ್ದಂತೆ, ಐಫೋನ್ ಬೆಲೆಗಳಲ್ಲಿ ಕಡಿತ

ಸರಕು ಸೇವಾ ತೆರಿಗೆ(ಜಿ.ಎಸ್.ಟಿ) ಜಾರಿಗೆ ಬರುತ್ತಿದ್ದಂತೆ ಆಪಲ್ ಸಂಸ್ಥೆ, ಭಾರತದಲ್ಲಿ ತನ್ನ ಉತ್ಪನ್ನಗಳ ಬೆಲೆ ಕಡಿತಗೊಳಿಸಿದೆ. ಐಫೋನ್, ಐಪ್ಯಾಡ್, ಮ್ಯಾಕ್ಸ್ ಮತ್ತು ಆಪಲ್ ಕೈಗಡಿಯಾರಗಳ ಬೆಲೆಗಳಲ್ಲಿ ಕಡಿತಗೊಳಿಸಿದೆ. ಜಿ.ಎಸ್.ಟಿ ಜಾರಿಯಿಂದ ಸಿಗುವ ಕಡಿಮೆ ತೆರಿಗೆಯ ಲಾಭವನ್ನು ಗ್ರಾಹಕರಿಗೆ ತಲುಪಲು ಆಪಲ್ ಸಂಸ್ಥೆ ನಿರ್ಧರಿಸಿದ್ದು, ಭಾರತದಲ್ಲಿ ತನ್ನ ಉತ್ಪನ್ನಗಳ ಮೇಲೆ ಶೇ.4 ರಿಂದ ಶೇ.7.5 ರವರೆಗೆ ದರ ಇಳಿಕೆ ಮಾಡಿದೆ.

60 ಸಾವಿರ ಬೆಲೆ ಇದ್ದ ಆಪಲ್ ಐಫೋನ್ 7 (32 ಜಿಬಿ) ಈಗ ದರ ಕಡಿತದ ನಂತರ 65 ಸಾವಿರಕ್ಕೆ ಸಿಗಲಿದೆ. 70 ಸಾವಿರ ರೂಪಾಯಿ ಐಫೋನ್ 7(128ಜಿಬಿ) ಈಗ 65 ಸಾವಿರಕ್ಕೇ ಸಿಗುತ್ತದೆ. ಇನ್ನು 256 ಜಿಬಿ ಇಂಟರ್ನಲ್ ಸ್ಟೋರೇಜ್ ಉಳ್ಳ ಐಫೋನ್ 7 ಬೆಲೆ ದರ ಕಡಿತದ ನಂತರ ರೂ.74,400 ಕ್ಕೆ ಇಳಿದಿದೆ.

  • No items.

ಹಾಗೆಯೇ ಐಫೋನ್ 7 ಪ್ಲಸ್(32ಜಿಬಿ) ರೂ.67,300 (ಹಿಂದಿನ ಬೆಲೆ 72,000), ಈಗ ಬೆಂಗಳೂರಿನಲ್ಲಿ ತಯಾರಾಗುತ್ತಿರುವ 32 ಜಿಬಿ ಐಫೋನ್ ಎಸ್.ಇ(ರೂ.27,200) ಈಗ ರೂ.26,000 ಕ್ಕೆ ಲಭ್ಯವಿದೆ. 32 ಜಿಬಿ ಐಫೋನ್ 6ಎಸ್ (ರೂ.50,000) ಬೆಲೆ ಕಡಿತದ ನಂತರ ರೂ. 46,900 ಕ್ಕೆ ಇಳಿದಿದೆ.

ಅಮೆರಿಕಾ ಮತ್ತು ಚೀನಾಗಳಲ್ಲಿನ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟ ಕುಸಿತ ಕಾಣುತ್ತಿರುವ ಆಪಲ್ ಸಂಸ್ಥೆ, ಭಾರತೀಯ ಮಾರುಕಟ್ಟೆಯ ಮೇಲೆ ಹೆಚ್ಚು ಗಮನ ಹರಿಸಿದೆ. ಹೀಗಾಗಿಯೇ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಂಡು ತನ್ನ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

Loading...
loading...
error: Content is protected !!