ಜಿ.ಎಸ್.ಟಿ ಯಿಂದ ಬೆಲೆಯಲ್ಲಿ ಏರಿಕೆ, ಇಳಿಕೆಯಾಗುವ ವಸ್ತುಗಳು ಇವು

ಜೂನ್ 30 ರ ಮಧ್ಯರಾತ್ರಿಯಿಂದ ಸರಕು ಸೇವಾ ತೆರಿಗೆ(ಜಿಎಸ್ಟಿ) ಪದ್ದತಿ ಜಾರಿಗೆ ಬಂದಿದೆ. ಈ ತೆರಿಗೆ ಪದ್ದತಿಯಿಂದಾಗುವ ಆಗುವ ಬದಲಾವಣೆಗಳು ಪ್ರತಿ ಭಾರತೀಯನ ಮೇಲೂ ಪ್ರಭಾವ ಬೀರಲಿವೆ. ಮಹತ್ವಾಕಾಂಕ್ಷೆಯ ಜಿಎಸ್ಟಿ ಕೌನ್ಸಿಲ್ ಒಟ್ಟು 1,211 ವಸ್ತುಗಳು, ಸೇವೆಗಳಿಗೆ ದರಗಳನ್ನು ಅಂತಿಮಗೊಳಿಸಿದೆ. ಇವುಗಳಲ್ಲಿ ಬಹುತೇಕ ವಸ್ತುಗಳು ಶೇ.18 ರ ಹಂತದಲ್ಲಿವೆ. ಜಿಎಸ್ಟಿ ಯಿಂದ ಜುಲೈ 1 ರಿಂದ ದರಗಳು ಕಡಿಮೆಯಾಗಲಿರುವ ಮತ್ತು ಏರಿಕೆಯಾಗಲಿರುವ ವಸ್ತುಗಳ ವಿವರಗಳು ಕೆಳಗಿನಂತಿವೆ.

ಆಹಾರ ಪದಾರ್ಥಗಳು ಕಡಿಮೆಯಾಗುವುದು
1. ಹಾಲಿನ ಪುಡಿ
2. ಮೊಸರು
3. ಮಜ್ಜಿಗೆ
4. ಅನ್ಬ್ರಾಂಡೆಡ್ ಜೇನುತುಪ್ಪ
5. ಬೆಣ್ಣೆ
6. ಮಸಾಲಾ ಪದಾರ್ಥಗಳು
7. ಕೆಲ ರೀತಿಯ ಟೀ
8. ಗೋಧಿ
9. ಅಕ್ಕಿ
10. ಹಿಟ್ಟು
11. ಕೆಲವು ರೀತಿಯ ಬಿಸ್ಕೆಟ್
12. ಕಡಲೆಕಾಯಿ ಎಣ್ಣೆ
13. ಪಾಮ್ ಆಯಿಲ್
14. ಸನ್ ಫ್ಲವರ್ ಆಯಿಲ್
15. ತೆಂಗಿನ ಎಣ್ಣೆ
16. ಸಾಸಿವೆ ಎಣ್ಣೆ
17 ಸಕ್ಕರೆ
18. ಬೆಲ್ಲ
19. ಸಕ್ಕರೆ ಮಿಠಾಯಿ
20. ಪಾಸ್ಟಾ
21. ನೂಡಲ್ಸ್
22 ಹಣ್ಣುಗಳು ಮತ್ತು ತರಕಾರಿಗಳು
23. ಉಪ್ಪಿನಕಾಯಿ
24. ಚಟ್ನಿ
25. ಸಿಹಿತಿಂಡಿಗಳು
26. ಕೆಚಪ್
27. ಸಾಸ್
28. ಮೇಲೋಗರಗಳು ಮತ್ತು ಸ್ಪ್ರೆಡ್
29. ತ್ವರಿತ ಆಹಾರ ಮಿಶ್ರಣಗಳು
30. ಮಿನರಲ್ ವಾಟರ್
31. ಐಸ್
32. ಬೇಕಿಂಗ್ ಪೌಡರ್
33. ಒಣ ದ್ರಾಕ್ಷಿ
34. ಗೋಡಂಬಿ

ದಿನಬಳಕೆಯ ವಸ್ತುಗಳು
1. ಸೋಪು
2. ಡಿಟರ್ಜೆಂಟ್ ಪೌಡರ್
3. ಅಗರಬತ್ತಿ
4. ಟಿಶ್ಯೂ ಪೇಪರ್ಸ್
5. ಕರವಸ್ತ್ರ
6. ಬೆಂಕಿ ಪೊಟ್ಟಣ
7. ಮೇಣದಬತ್ತಿಗಳು
8. ಇದ್ದಲು
9. ಸೀಮೆಎಣ್ಣೆ
10. ಅಡುಗೆ ಅನಿಲ
11. ಚಮಚ
12. ಫೋರ್ಕ್ಸ್
13. ಅಡುಗೆ ಸೌಟು
14. ಟೂಥ್ ಪೇಸ್ಟ್
15 ಟೂತ್ ಪೌಡರ್
16. ಕಾಡಿಗೆ
17. ಎಲ್ಪಿಜಿ ಸ್ಟೌವ್
18. ಪ್ಲಾಸ್ಟಿಕ್ ಟಾರ್ಪಾಲಿನ್

ಸ್ಟೇಷನರಿ
1. ನೋಟ್ ಪುಸ್ತಕ
2. ಪೆನ್ನುಗಳು
3. ಎಲ್ಲಾ ರೀತಿಯ ಕಾಗದಗಳು
4. ಗ್ರಾಫ್ ಪೇಪರ್
5. ಶಾಲಾ ಬ್ಯಾಗ್
6. ವ್ಯಾಯಾಮ ಪುಸ್ತಕ
7. ಡ್ರಾಯಿಂಗ್ ಪುಸ್ತಕಗಳು
8. ಕಾರ್ಬನ್ ಪೇಪರ್
9. ಪ್ರಿಂಟರ್

ಆರೋಗ್ಯ
1. ಇನ್ಸುಲಿನ್
2. ವೈದ್ಯಕೀಯ ಉದ್ದೇಶಕ್ಕಾಗಿ ಬಳಸುವ ಎಕ್ಸರೆ ಫಿಲ್ಮ್
3. ಡಯಾಗ್ನೋಸ್ಟಿಕ್ ಕಿಟ್ ಗಳು
4. ಕನ್ನಡಕ
5. ಕ್ಯಾನ್ಸರ್, ಮಧುಮೇಹ ಔಷಧಿಗಳು

ಉಡುಪು
1. ಸಿಲ್ಕ್
2. ಉಣ್ಣೆ ಬಟ್ಟೆ
3. ಖಾದಿ ನೂಲು
4. ಗಾಂಧಿ ಟೋಪಿ
5. ರೂ. 500 ಕ್ಕಿಂತ ಕಡಿಮೆಯ ಪಾದರಕ್ಷೆಗಳು
6. ರೂ. 1,000 ಕ್ಕಿಂತ ಕಡಿಮೆ ಬೆಲೆಯ ಬಟ್ಟೆ

ಇತರೆ
1. 15 ಎಚ್.ಪಿ ಮೀರದ ಡೀಸೆಲ್ ಎಂಜಿನ್
2. ಟ್ರಾಕ್ಟರ್ ಹಿಂದಿನ ಟೈರು, ಟ್ಯೂಬ್ ಗಳು
3. ವೇಯಿಂಗ್ ಮಷೀನ್
4. ಯು.ಪಿ.ಎಸ್
5. ವಿದ್ಯುತ್ ಟ್ರಾನ್ಸ್ ಫಾರ್ಮರ್
6. ವೈಂಡಿಂಗ್ ವೈರ್
7. ಹೆಲ್ಮೆಟ್
8. ಪಟಾಕಿ
9. ಇಂಜಿನ್ ಆಯಿಲ್
10. ದ್ವಿಚಕ್ರ ವಾಹನಗಳು
11. 100 ರೊಳಗಿನ ಸಿನಿಮಾ ಟಿಕೆಟ್
12. ಗಾಳಿಪಟ
13. ಸಣ್ಣ ಮತ್ತು ಮಧ್ಯಮ ವರ್ಗದ ಕಾರುಗಳು
14. ರೂ. 7,500 ಕ್ಕಿಂತ ಕಡಿಮೆ ಶುಲ್ಕದ ಹೋಟೆಲುಗಳು
15. ಸಿಮೆಂಟ್
16. ಇಟ್ಟಿಗೆ
17. ರಸಗೊಬ್ಬರ

ಹೆಚ್ಚಳವಾಗುವ ವಸ್ತು ಮತ್ತು ಸೇವೆಗಳು
ಆಹಾರ ಪದಾರ್ಥಗಳು
1. ಪನ್ನೀರ್
2. ಕಾಫಿ
3. ಮಸಾಲೆ ಪುಡಿ
4. ಚಾಕೋಲೇಟ್ಗಳು
5. ತುಪ್ಪ
6. ಕೆಲ ವಿಧದ ಬಿಸ್ಕೆಟ್
7. ಚೂಯಿಂಗ್ ಗಮ್
8. ಐಸ್ ಕ್ರೀಮ್
9. ಕೆಲವು ರೀತಿಯ ಟೀ

ಎಲೆಕ್ಟ್ರಾನಿಕ್ಸ್
1. ಏರ್ ಕಂಡಿಷನರ್
2 ಫ್ರಿಡ್ಜ್
3. ವಾಷಿಂಗ್ ಮಷೀನ್
4. ಟಿವಿ
5. ಸ್ಮಾರ್ಟ್ ಫೋನ್
6. ಲ್ಯಾಪ್ ಟಾಪ್
7. ಡೆಸ್ಕ್ ಟಾಪ್ ಕಂಪ್ಯೂಟರ್

ಇತರೆ
1. ಸುಗಂಧ ದ್ರವ್ಯಗಳು
2. ಆಯುರ್ವೇದ ಮತ್ತು ಇತರ ಪರ್ಯಾಯ ಔಷಧಗಳು
3 ಚಿನ್ನ
4. ರೂ. 7,500 ಗಿಂತ ಹೆಚ್ಚಿನ ದರದ ಹೋಟೆಲುಗಳು
5. ಫೈನ್ ಡೈನಿಂಗ್ ರೆಸ್ಟೋರೆಂಟ್ ಗಳು
6. ಪಂಚತಾರಾ ಹೋಟೆಲ್ ಗಳ ಒಳಗಿರುವ ರೆಸ್ಟೋರೆಂಟ್ ಗಳು
7. 100 ಕ್ಕಿಂತ ಹೆಚ್ಚಿನ ಬೆಲೆಯ ಚಲನಚಿತ್ರ ಟಿಕೆಟ್
8. ವಾದ್ಯಗೋಷ್ಠಿಗಳು
9. ಐಪಿಎಲ್ ಪಂದ್ಯಗಳು
10. ರೂ. 1,000 ಹೆಚ್ಚಿನ ಬೆಲೆಯ ಬಟ್ಟೆ
11. ಶ್ಯಾಂಪೂ
12. ಎಸಿ, ಪ್ರಥಮ ದರ್ಜೆ ರೈಲು ಟಿಕೆಟ್
13. ಬಿಸಿನೆಸ್ ಕ್ಲಾಸ್ ವಿಮಾನ ಟಿಕೆಟ್ಟುಗಳು
14. ಕೊರಿಯರ್ ಸೇವೆಗಳು
15. ಮೊಬೈಲ್ ಫೋನ್ ಶುಲ್ಕ
16. ವಿಮಾ ಕಂತುಗಳು
17. ಬ್ಯಾಂಕ್ ಶುಲ್ಕಗಳು
18. ಬ್ರಾಡ್ಬ್ಯಾಂಡ್ ಸೇವೆಗಳು
19. ಕ್ರೆಡಿಟ್ ಕಾರ್ಡ್ ಬಿಲ್ಲು
20. 350ಸಿಸಿ ಗಿಂತ ಹೆಚ್ಚಿನ ಇಂಜಿನ್ ನ ದ್ವಿಚಕ್ರ ವಾಹನ
21. ಸಣ್ಣ ಮತ್ತು ಮಧ್ಯಮ ರೀತಿಯ ಕಾರುಗಳು
22. ಹೈಬ್ರಿಡ್ ಕಾರುಗಳು
23. ಮೀನುಗಾರಿಕೆ ಬಲೆಗಳು
24. ಯೋಗ ಮ್ಯಾಟ್
25. ಫಿಟ್ನೆಸ್ ಉಪಕರಣಗಳು
26. ಸಿಗರೇಟ್
27. ತಂಬಾಕು
28. ಐಷಾರಾಮಿ ವಸ್ತುಗಳು