ಜಿ.ಎಸ್.ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್ – News Mirchi

ಜಿ.ಎಸ್.ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್

ಅಹಮದಾಬಾದ್: ಗುಜರಾತ್ ನಲ್ಲಿ ಚುನಾವಣೆ ಪ್ರಚಾರದ ಬಿಸಿಯೇರುತ್ತಿದೆ. ಆಡಳಿತ ಪಕ್ಷ, ಪ್ರತಿಪಕ್ಷಗಳು ಪರಸ್ಪರ ತೀವ್ರ ಟೀಕೆಗಳಿಗೆ ಇಳಿಯುತ್ತಿವೆ. ಶೀಘ್ರದಲ್ಲಿಯೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಗುಜರಾತ್ ನಲ್ಲಿ ಪ್ರವಾಸ ಕೈಗೊಂಡರೆ, ಮರುದಿನವೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದರು.

ಜಿಎಸ್ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ರಾಹುಲ್ ವ್ಯಂಗ್ಯವಾಡಿದರು. ನೋಟು ರದ್ದು ಕ್ರಮ ವಿಫಲವಾಗಿದೆ, ಹೀಗಾಗಿ ಎರಡು ದಿನಗಳ ಕಾಲ ಏನು ಮಾಡಬೇಕೆಂಬುದೇ ಮೋದಿಗೆ ಅರ್ಥವಾಗಲಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಎಲ್ಲರ ಸರ್ಕಾರವಾಗುತ್ತದೆ ಎಂದ ರಾಹುಲ್, ಮೇಕ್ ಇನ್ ಇಂಡಿಯಾ ವಿಫಲವಾಗಿದೆ ಎಂದು ಆರೋಪಿಸಿದರು. [ಇದನ್ನೂ ಓದಿ: ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲಾಗುವುದು : ಬಿಎಸ್ ವೈ]

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿ ಮೇಲೂ ರಾಹುಲ್ ವಾಗ್ದಾಳಿ ನಡೆಸಿದರು. ಗುಜರಾತ್ ಯುವಕರಿಗೆ ಬೇಕಿರುವುದು ಶಿಕ್ಷಣ, ಆದರೆ ಆಡಳಿತ ಪಕ್ಷ ಜನಸಾಮಾನ್ಯರಿಗೆ ಶಿಕ್ಷಣ ಕೈಗೆಟುಕದಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಕಾಲೇಜು, ವಿಶ್ವವಿದ್ಯಾಲಯಗಳನ್ನು ಎಲ್ಲಾ ಉದ್ಯಮಿಗಳ ಕೈಗೆ ನೀಡಿದ್ದಾರೆ ಎಂದು ಆರೋಪಿಸಿದರು. ಇದುವರೆಗೂ ಚುನಾವಣಾ ದಿನಾಂಕವನ್ನು ಘೋಷಿಸದ ಚುನಾವಣಾ ಆಯೋಗದ ವಿರುದ್ಧವೂ ರಾಹುಲ್ ಆಕ್ರೋಶ ವ್ಯಕ್ತಪಡಿಸಿ, ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಒತ್ತಾಯಿಸಿದರು. ದೇಶದಲ್ಲಿ ಗುಜರಾತ್ ತುಂಬಾ ಮಹತ್ವವಾದದ್ದು, ಇದನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...