ಜಮ್ಮೂ ಕಾಶ್ಮೀರದಲ್ಲೂ ಜಾರಿಗೆ ಬಂತು ಜಿಎಸ್ಟಿ – News Mirchi

ಜಮ್ಮೂ ಕಾಶ್ಮೀರದಲ್ಲೂ ಜಾರಿಗೆ ಬಂತು ಜಿಎಸ್ಟಿ

ಕಾಶ್ಮೀರ: ಸರಕು ಸೇವಾ ತೆರಿಗೆ(ಜಿಎಸ್ಟಿ) ಶುಕ್ರವಾರ ಮಧ್ಯರಾತ್ರಿಯಿಂದ ಜಮ್ಮೂ ಕಾಶ್ಮೀರದಲ್ಲೂ ಜಾರಿಗೆ ಬಂದಿದೆ. ಜಮ್ಮೂ ಕಾಶ್ಮೀರ ಜಿಎಸ್ಟಿ ಮಸೂದೆ-2017 ಅನ್ನು ಧ್ವನಿಮತದ ಮೂಲಕ ವಿಧಾನಸಭೆ ಅನುಮೋದಿಸಿತು. ಈ ಮಸೂದೆಯನ್ನು ರಾಜ್ಯದ ವಿಶೇಷ ಸ್ಥಾನಮಾನಕ್ಕೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸಿದವು.

ಜಿಎಸ್ಟಿ ಜಾರಿ ಕುರಿತು ನೆಲೆಸಿರುವ ಆತಂಕಗಳನ್ನು ಪರಿಹರಿಸುತ್ತೇವೆ ಎಂದು ಸಿಎಂ ಮೆಹಬೂಬಾ ಮುಫ್ತಿ ಭರವಸೆ ನೀಡಿದ್ದಾರೆ. ದೇಶಕ್ಕೆ ಒಳಿತಾಗುವ ಯಾವುದೇ ವಿಷಯ ಕಾಶ್ಮೀರಕ್ಕೆ ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ಅವರು ಹೇಳಿದರು. ಅದಕ್ಕೂ ಮುನ್ನ ಕಾಶ್ಮೀರಕ್ಕೆ ಜಿಎಸ್ಟಿ ಯನ್ನು ಅನ್ವಯಿಸುವಂತೆ ಮಾಡಲು ಸಂಬಂಧಿಸಿದ ಆದೇಶಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನುಮೋದನೆ ನೀಡಿದರು. ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಯನ್ನು ಯಾವುದೇ ಧಕ್ಕೆ ಇಲ್ಲವೆಂದರು. ಜಿಎಸ್ಟಿ ಜಾರಿಯಿಂದಾಗಿ ಶಿಕ್ಷಣ ಭಾರ ಹೆಚ್ಚಾಗುತ್ತದೆ ಎಂಬ ಮಾತುಗಳನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದೆ.

ಭಾರತದ ಅತಿದೊಡ್ಡ ತೆರಿಗೆ ಸುಧಾರಣಾ ಕ್ರಮವಾದ ಜಿಎಸ್ಟಿ ಜಾರಿಯಿಂದಾಗಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರವನ್ನು ಭಾರತ ಆರ್ಥಿಕತೆಯ ಮುಖ್ಯವಾಹಿನಿಯೊಂದಿಗೆ ಒಗ್ಗೂಡಿಸುವಂತಾಗುತ್ತದೆ. ಇದುವರೆಗೂ ತೆರಿಗೆ ವಿಧಾನದಲ್ಲಿ ಭಾರತದ್ದೇ ಒಂದು ದಾರಿಯಾದರೆ, ಭಾರತದ ಭಾಗವಾಗಿರುವ ಜಮ್ಮು ಕಾಶ್ಮೀರದ್ದೇ ಒಂದು ದಾರಿಯಾಗಿತ್ತು.

ಸಂವಿಧಾನದ 370ನೇ ವಿಧಿಯು ಜಮ್ಮೂ ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ವಾಯತ್ತ ಸ್ಥಾನಮಾನವನ್ನು ನೀಡುತ್ತದೆ. ಆದರೂ ರಾಜ್ಯದಲ್ಲಿ ಕಾನೂನು ರಚಿಸುವ, ರಕ್ಷಣೆ, ವಿದೇಶೀ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ಅಧಿಕಾರ ಉಳಿಸಿಕೊಂಡಿದೆ. 1994 ರಿಂದೀಚೆಗೆ ಸರ್ವೀಸ್ ಟ್ಯಾಕ್ಸ್ ಭಾರತದಾದ್ಯಂತ ಜಾರಿಯಲ್ಲಿದ್ದರೆ, ಕೇವಲ ಜಮ್ಮು ಕಾಶ್ಮೀರವನ್ನು ಇದರಿಂದ ಹೊರಗಿಡಲಾಗಿತ್ತು. ಜಮ್ಮು ಕಾಶ್ಮೀರವು ತನ್ನದೇ ಆತ ತೆರಿಗೆಯನ್ನು ವಿಧಿಸುತ್ತಿತ್ತು.

Loading...