ಗುಜರಾತ್ ಚುನಾವಣಾ ವೇಳಾಪಟ್ಟಿ ಬಿಡುಗಡೆ – News Mirchi

ಗುಜರಾತ್ ಚುನಾವಣಾ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಬುಧವಾರ ಗುಜರಾತ್ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಗುಜರಾತ್ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 9, 14 ರಂದು ಮತದಾನ ನಡೆಯಲಿದ್ದು, 18 ರಂದು ಫಲಿತಾಂಶ ಪ್ರಕಟವಾಗಲಿದೆ.

182 ಸದಸ್ಯರಿರುವ ಗುಜರಾತ್ ವಿಧಾನಸಭೆ ಅವಧಿ ಜನವರಿ 23ಕ್ಕೆ ಕೊನೆಗೊಳ್ಳಲಿದೆ. ಒಟ್ಟು 50,128 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಎ.ಕೆ.ಜೋತಿ ಹೇಳಿದರು.

ಮೊದಲ ಬಾರಿಗೆ, ಗುಜರಾತ್ ನಲ್ಲಿ ಮತದಾರರ ದೃಡೀಕರಣ ಪತ್ರಗಳಿರುವ ಮತಯಂತ್ರಗಳ ಜತೆಗೆ ಪ್ರತಿ ಕ್ಷೇತ್ರಕ್ಕೆ ಕನಿಷ್ಟ ಒಂದಾದರೂ ಸಂಪೂರ್ಣ ಮಹಿಳಾ ಮತದಾರರಿಗಾಗಿ ಮತದಾನ ಕೇಂದ್ರಗಳ ಸ್ಥಾಪನೆಗೆ ಚುನಾವಣಾ ಆಯೋಗ ಕಸರತ್ತು ನಡೆಸಿದೆ.

Get Latest updates on WhatsApp. Send ‘Add Me’ to 8550851559

Loading...