17 ಮಕ್ಕಳಾದ ಮೇಲೆ ಕುಟುಂಬ ಯೋಜನೆಗೆ ಒಪ್ಪಿದ ಬುಡಕಟ್ಟು ದಂಪತಿ

ಗುಜರಾತಿನ ದಾಹೋಡ್ ಜಿಲ್ಲೆಯ ಬುಡಕಟ್ಟು ದಂಪತಿಗಳು 17 ಮಕ್ಕಳನ್ನು ಹೆತ್ತ ನಂತರ ಸಂತಾನ ಶಕ್ತಿಹರಣ ಚಿಕಿತ್ಸೆಗೆ ಮುಂದಾಗಿದ್ದಾರೆ. ಈಗಿರುವ 17 ಮಕ್ಕಳಲ್ಲಿ‌ 16 ಹೆಣ್ಣು ಮಕ್ಕಳಾಗಿದ್ದು, 1 ಒಂದು ಗಂಡು ಮಗು.

ಗ್ರಾಮಸ್ಥರೆಲ್ಲಾ ಸೇರಿ ಅ ದಂಪತಿಗಳನ್ನು ಕುಟುಂಬ ಯೋಜನೆ (family planning) ಚಿಕಿತ್ಸೆಗೆ ಒಪ್ಪಿಸದೇ ಹೋಗಿದ್ದಿದ್ದರೆ ಮಕ್ಕಳ ಸಂಖ್ಯೆ 18 ಆಗುತ್ತಿತ್ತೇನೋ. ರಾಮ್ ಸಿನ್ಹ (44) ಮತ್ತು ಆತನ ಪತ್ನಿ ಕಾನು ಸಂಗೋಟ್ (40) ಗಂಡು ಮಗುವನ್ನು ಪಡೆಯುವ ಹಂಬಲದಿಂದ 16 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಂತರ ಗ್ರಾಮಸ್ಥರೆಲ್ಲಾ ಸೇರಿ ಕುಟುಂಬ ಯೋಜನೆಯ ಪ್ರಾಮುಖ್ಯತೆಯನ್ನು ತಿಳಿಸಿದ ಮೇಲೆ ದಂಪತಿಗಳು ಸಂತಾಣ ಶಕ್ತಿಹರಣ ಚಿಕಿತ್ಸೆಗೆ ಒಪ್ಪಿದ್ದಾರೆ. ಇನ್ನೂ ಹೆಸರಿಡದ ತಮ್ಮ 17 ನೇ ಮಗುವಿನ ಜನ್ಮ ದಿನಾಂಕವೂ ಆ ದಂಪತಿಗಳಿಗೆ ನೆನಪಿಲ್ಲ.

Loading...

Leave a Reply

Your email address will not be published.

error: Content is protected !!