ಬಿಜೆಪಿ ಚುನಾವಣಾ ಪ್ರಚಾರದಲ್ಲಿ “ಪಪ್ಪು” ಪದ ಬಳಕೆ ನಿಷೇಧಿಸಿದ ಚುನಾವಣಾ ಆಯೋಗ – News Mirchi

ಬಿಜೆಪಿ ಚುನಾವಣಾ ಪ್ರಚಾರದಲ್ಲಿ “ಪಪ್ಪು” ಪದ ಬಳಕೆ ನಿಷೇಧಿಸಿದ ಚುನಾವಣಾ ಆಯೋಗ

ಚುನಾವಣೆ ಪ್ರಚಾರದಲ್ಲಿ ವಿದ್ಯುನ್ಮಾನ ಜಾಹೀರಾತುಗಳಲ್ಲಿ “ಪಪ್ಪು” ಪದವನ್ನು ಬಳಸದಂತೆ ಗುಜರಾತ್ ಚುನಾವಣಾ ಆಯೋಗ ನಿಷೇಧಿಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ “ಪಪ್ಪು” ಪದ ಬಳಿಸಿ ವ್ಯಂಗ್ಯ ಮಾಡಿ ಜಾಹೀರಾತು ನೀಡುವುದನ್ನು ನಿಷೇಧಿಸಿದೆ.

ಅಭಿವೃದ್ಧಿಯ ಕುರಿತಂತೆ ಮೂಕ ಮತ್ತು ಅದನ್ನು ಅರ್ಥ ಮಾಡಿಕೊಳ್ಳದಿರುವ ದಡ್ಡನಂತೆ ರಾಹುಲ್ ಗಾಂಧಿಯನ್ನು ಬಿಜೆಪಿ ಚಿತ್ರಿಸಿತ್ತು. ಆದರೆ ಇದೀಗ ಆ ವೀಡಿಯೋವನ್ನು ಗುಜರಾತ್ ಚುನಾವಣಾ ಆಯೋಗ ನಿಷೇಧಿಸಿದೆ. ಆಯೋಗದ ನಿರ್ಧಾರಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ, ಆದರೆ ಅದರ ಅದೇಶವನ್ನು ಪಾಲಿಸುತ್ತೇವೆ ಎಂದು ಹೇಳಿದೆ. ಪ್ರಚಾರದ ವೀಡಿಯೋದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯವಿಲ್ಲ, ಆದರೆ ನಾವು ಚುನಾವಣಾ ಆಯೋಗದ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜೀತು ವಾಘಾನಿ ಹೇಳಿದ್ದಾರೆ.

ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14 ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 18 ರಂದು ಫಲಿತಾಂಶ ಹೊರಬೀಳಲಿದೆ.

 

 

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!