ನಾನು ನಪುಂಸಕನೆಂದು ಹೇಳಿದ್ದ ಗುರ್ಮೀತ್ ಸಿಂಗ್

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಆಧ್ಯಾತ್ಮಿಕ ಗುರು ಡೇರಾ ಸಚ್ಚಾ ಸೌದಾ ಮುಖಸ್ಥ ಗುರ್ಮೀತ್ ಸಿಂಗ್ ವಿಚಾರಣೆಯಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾನೆ. ಅದರಲ್ಲಿ ಪ್ರಮುಖವಾದದ್ದು ತನ್ನನ್ನು ತಾನು ನಪುಂಸಕ ಎಂದು ಹೇಳಿಕೊಂಡಿದ್ದು. 1990 ರಿಂದ ತಾನೊಬ್ಬ ನಪುಂಸಕನಾಗಿ ಬದಲಾಗಿದ್ದೇನೆ, ಹೀಗಿದ್ದಾಗ 1999 ತಾನು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದೆ ಎನ್ನುತ್ತಿರುವುದು ಸುಳ್ಳು ಪ್ರಚಾರ. ಅಸಲಿಗೆ ಈ ಆರೋಪಗಳಲ್ಲಿ ಸ್ವಲ್ಪೂ ಸತ್ಯವಿಲ್ಲ ಎಂದು ಸಿಬಿಐ ಕೋರ್ಟ್ ವಿಚಾರಣೆಯಲ್ಲಿ ಹೇಳಿದ್ದಾನೆ.

ತಾನೊಬ್ಬ ಅಮಾಯಕನೆಂದು ಎಷ್ಟೇ ಹೇಳಿದರೂ, ಗುರ್ಮೀತ್ ಹೇಳಿದೆಲ್ಲವೂ ಸುಳ್ಳು ಎಂದು ಸಿಬಿಐ ನ್ಯಾಯಾಲಯ ತೀರ್ಮಾನಕ್ಕೆ ಬಂದಿತು. ನಿಮಗೆ ಇಬ್ಬರು ಮಕ್ಕಳಿದ್ದಾರಲ್ವಾ, ಈ ಕುರಿತು ಏನು ಹೇಳ್ತೀರಿ ಎಂದು ಪ್ರಶ್ನಿಸಿದಾಗ ಗುರ್ಮೀತ ಮೌನಕ್ಕೆ ಶರಣಾಗಿದ್ದಾಗಿ ತಿಳಿದು ಬಂದಿದೆ. ಆ ನಂತರ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾದ ಮಹಿಳೆಯ ಗುರ್ಮೀತ್ ಕುರಿತು ಮತ್ತಷ್ಟು ವಿಷಯಗಳನ್ನು ಬಹಿರಂಗಪಡಿಸಿದರು.

ಆಶ್ರಮದಲ್ಲಿ ನಡೆದ ಲೈಂಗಿಕ ದಾಳಿ ಬಗ್ಗೆ ಮನೆಯವರಿಗೆ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುರ್ಮೀತ್ ಹೆದರಿಸಿದ್ದರು ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. ಕುಟುಂಬ ಸದಸ್ಯರನ್ನು ಹತ್ಯೆ ಮಾಡಿಸುವುದಾಗಿ ಹಲವು ಬಾರಿ ಬೆದರಿಸಿದ್ದರು ಎಂದೂ ಆಕೆಯ ನ್ಯಾಯಾಲಯದ ಮುಂದೆ ಹೇಳಿದರು. ಆರೋಪಿ ಗುರ್ಮೀತ್ ಗೆ ಇಬ್ಬರು ಹೆಣ್ಣು ಮಕ್ಕಳಿರುವುದನ್ನು ಮತ್ತು ಸಂತ್ರಸ್ತ ಮಹಿಳೆ ಹೇಳಿದ ವಿವರಗಳನ್ನು ಪರಿಶೀಲಿಸಿದ ನಂತರವೇ ಸಿಬಿಐ ಕೋರ್ಟ್ ಗುರ್ಮೀತ್ ಗೆ 20 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ ಪ್ರತಿ ಪ್ರಕರಣದಲ್ಲಿ ರೂ.15 ಲಕ್ಷದಂತೆ ದಂಡ ವಿಧಿಸಿದ್ದರು.

Related News