Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಆತನೊಬ್ಬ ಕಾಮ ಪಿಶಾಚಿ ಎಂದ ವೈದ್ಯರು – News Mirchi

ಆತನೊಬ್ಬ ಕಾಮ ಪಿಶಾಚಿ ಎಂದ ವೈದ್ಯರು

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ನಾಲ್ಕು ಗೋಡೆಗಳ ನಡುವೆ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾನೆ. ತನ್ನದೇ ಆದ ಪ್ರತ್ಯೇಕ ಪ್ರಪಂಚನ್ನು ನಿರ್ಮಿಸಿಕೊಂಡು ಮೆರೆಯುತ್ತಿದ್ದವನು ಈಗ ಜೈಲಿನಲ್ಲಿ ತನ್ನ ನೋವನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಯದೆ ಆತನಿಗೆ ಉಸಿರೇ ನಿಂತಂತಾಗುತ್ತಿದೆ. ಜೈಲಿನಲ್ಲಿ ಕಳೆಯಬೇಕಾದ ಅವಧಿಯನ್ನು ನೆನೆಸಿಕೊಂಡು ಸದಾ ಚಿಂತೆಯಲ್ಲಿ ಮುಳುಗಿದ್ದಾನೆ ಎಂದು ಗುರ್ಮೀತ್ ನನ್ನು ಪರೀಕ್ಷಿಸಲು ಶನಿವಾರ ರೋಹಟಕ್ ಜೈಲಿಗೆ ಹೋದ ವೈದ್ಯರ ತಂಡದಲ್ಲೊಬ್ಬರು ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಹೆಸರನ್ನು ಗುಪ್ತವಾಗಿಡುವಂತೆ ಮನವಿ ಮಾಡಿರುವ ಆ ವೈದ್ಯರು, ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗುರ್ಮೀತ್ ಒಬ್ಬ ಕಾಮ ಪಿಶಾಚಿಯಾಗಿದ್ದು, ಜೈಲಿಗೆ ಬಂದ ದಿನದಿಂದಲೂ ಸೆಕ್ಸ್ ಗೆ ದೂರವಾಗಿರುವ ಆತ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಆತನಿಗೆ ಸಾಮಾನ್ಯ ಜೈಲು ಶಿಕ್ಷೆಯೂ ಮರಣದಂಡನೆಯಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಸರಿಯಾಗಿ ನಿದ್ದೆಯಿಲ್ಲದೆ, ಸದಾ ಏನೋ ಯೋಚಿಸುತ್ತಾ ವಿಚಲಿತನಾದಂತೆ ಕಂಡುಬರುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಗುರ್ಮೀತ್ ಸದ್ಯ ಅನುಭವಿಸುತ್ತಿರುವ ಮಾನಸಿಕ ಪರಿಸ್ತಿತಿಯನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು. ತಡವಾದರೆ ಕಷ್ಟ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಗುರ್ಮೀತ್ ಡ್ರಗ್ಸ್ ಉಪಯೋಗಿಸುತ್ತಿರುವ ವಿಷಯದ ಕುರಿತು ಸ್ಪಷ್ಟವಾಗಿ ತಿಳಿದಿಲ್ಲ ಎಂದಿರುವ ಅವರು, 1988 ರಿಂದ ಈಚೆಗೆ ಗುರ್ಮೀತ್ ಮದ್ಯಸೇವನೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಆದರೆ ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ತರಿಸಿಕೊಳ್ಳುವ ಸೆಕ್ಸ್ ಟಾನಿಕ್, ಎನರ್ಜಿ ಡ್ರಿಂಕ್ಸ್ ಮುಂತಾದವುಗಳನ್ನು ಅತಿಯಾಗಿ ಉಪಯೋಗಿಸಿದ್ದಾರೆ ಎಂದು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!