ಅತ್ಯಾಚಾರ ಪ್ರಕರಣ, ಗುರ್ಮೀತ್ ರಾಮ್ ರಹೀಮ್ ಅಪರಾಧಿ – News Mirchi

ಅತ್ಯಾಚಾರ ಪ್ರಕರಣ, ಗುರ್ಮೀತ್ ರಾಮ್ ರಹೀಮ್ ಅಪರಾಧಿ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಲವು ಇಂದು ತೀರ್ಪು ನೀಡಿದೆ. ಗುರ್ಮೀತ್ ರವರನ್ನು ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಾಗುತ್ತದೆ. ತೀರ್ಪು ಹೊರಬೀಳುತ್ತಿದ್ದಂತೆಯೇ ಡೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ತಜ್ಞರ ಪ್ರಕಾರ ಗುರ್ಮೀತ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ನಡೆದಂತೆ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ ಗುರ್ಮೀತ್ ರಾಮ್ ರಹೀಮ್ ವಿರುದ್ಧ 2002 ರಲ್ಲಿ ಕೇಸು ದಾಖಲಿಸಿಕೊಂಡಿತ್ತು. ಆದರೆ ತಮ್ಮ ಮೇಲಿನ ಆರೋಪಗಳನ್ನು ಗುರ್ಮೀತ್ ನಿರಾಕರಿಸಿದ್ದರು.

[ಇದನ್ನೂ ಓದಿ: ಗುರ್ಮೀತ್ ರಾಮ್ ರಹೀಮ್ ಗೆ ಏಕಿಷ್ಟು ಜನ ಬೆಂಬಲ ಗೊತ್ತೇ?]

ಇಂದು ಕೋರ್ಟ್ ತೀರ್ಪು ನೀಡಲಿದೆ ಎಂದು ತಿಳಿದು ಸಾವಿರಾರು ಜನ ಗುರ್ಮೀತ್ ಬೆಂಬಲಿಗರು ಪಂಚಕುಲದಲ್ಲಿ ಸೇರಿದ್ದರು. ಪೊಲೀಸರು ಮತ್ತು ಗುರ್ಮೀತ್ ಮನವಿಯ ನಂತರವೂ ಬೆಂಬಲಿಗರು ನಗರವನ್ನು ಬಿಡಲು ನಿರಾಕರಿಸಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿರ್ಸಾದಲ್ಲಿ ಅರೆ ಸೇನಾ ಪಡೆಗಳನ್ನೂ ನಿಯೋಜಿಸಲಾಗಿದೆ

Loading...