ಗುರ್ಮೀತ್ ದತ್ತುಪುತ್ರಿ ಹನಿಪ್ರೀತ್ ಜೀವಕ್ಕೆ ಅಪಾಯ? – News Mirchi

ಗುರ್ಮೀತ್ ದತ್ತುಪುತ್ರಿ ಹನಿಪ್ರೀತ್ ಜೀವಕ್ಕೆ ಅಪಾಯ?

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಮೂಲಗಳು ಭಾವಿಸುತ್ತಿವೆ. ಗುರ್ಮೀತ್ ಅಕ್ರಮ ಚಟುವಟಿಕೆಗಳನ್ನು ಈಕೆ ಹತ್ತಿರದಿಂದ ಬಲ್ಲವಳಾದ್ದರಿಂದ ಆಕೆಯನ್ನು ಮುಗಿಸಲು ಯತ್ನ ನಡೆದಿದೆ ಎಂದು ಗುಪ್ತಚರ ಸಂಸ್ಥೆಗೆ ಮಾಹಿತಿ ಬಂದಿದೆ ಎನ್ನಲಾಗಿದೆ.

ಈ ಮಾಹಿತಿಯಿಂದ ಹರಿಯಾಣ ಸರ್ಕಾರ ಎಚ್ಚೆತ್ತುಕೊಂಡಿದೆ. ಹನಿಪ್ರೀತ್ ಪತ್ತೆಗಾಗಿ ಹುಡುಕಾಟ ನಡೆದಿದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿ ಬಿ.ಎಸ್.ಸಂಧೂ ಮಾಧ್ಯಮಗಳಿಗೆ ಹೇಳಿದ್ದಾರೆ. ಆಕೆಯನ್ನು ಬಂಧಿಸಿ ಗುಪ್ತ ವಿಚಾರಣೆ ನಡೆಸುತ್ತಿರುವುದಾಗಿ ಬರುತ್ತಿರುವ ಸುದ್ದಿಗಳನ್ನು ಅವರು ನಿರಾಕರಿಸಿದ್ದಾರೆ.

ಕಳೆದ ತಿಂಗಳು 25 ರಂದು ಆಕೆ ಗುರ್ಮೀತ್ ಸಿಂಗ್ ನನ್ನು ರೋಹಟಕ್ ಜೈಲಿನಲ್ಲಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದಳು. ಜೈಲು ಸಿಬ್ಬಂಧಿ ಆಕೆಗೆ ಅನುಮತಿ ನಿರಾಕರಿಸಿದ್ದರಿಂದ ಬೆಂಬಲಿಗರ ವಾಹನದಲ್ಲಿ ಆಕೆಯ ಹೊರಟುಹೋದಳು. ಅಂದಿನಿಂದ ಆಕೆಯ ಸುಳಿವೇ ಇಲ್ಲ.

ಗುರ್ಮೀತ್ ಸಿಂಗ್ ನನ್ನು ಪಂಚಕುಲ ಸಿಬಿಐ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿದ ನಂತರ ರೋಹಟಕ್ ಜೈಲಿಗೆ ಸಾಗಿಸುವ ವೇಳೆ ಹನಿಪ್ರೀತ್ ಸೂಚನೆಯಂತೆಯೇ ಡೇರಾ ಬೆಂಬಲಿಗರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗುರ್ಮೀತ್ ನನ್ನು ಬಿಡಿಸಲು ಯತ್ನಿಸಿದ್ದರು ಎಂಬ ಆರೋಪಗಳಿವೆ. ಹೀಗಾಗಿ ಪೊಲೀಸರು ಆಕೆಗಾಗಿ ಲುಕೌಟ್ ನೋಟೀಸ್ ಜಾರಿ ಮಾಡಿದ್ದಾರೆ.

Loading...