ಪತ್ನಿ, ಅತ್ತಿಗೆಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಯೋಧ

ಎನ್.ಎಸ್.ಜಿ ಕಮ್ಯಾಂಡೋ ಒಬ್ಬರು ಪತ್ನಿ ಮತ್ತು ಅತ್ತಿಗೆಯನ್ನು ಗುಂಡಿಟ್ಟು ಕೊಂದು ನಂತರ ತಾವೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ, ಗುರುಗ್ರಾಮದ ಮನೇಸಾರ್ ನಲ್ಲಿನ ಸೇನಾ ಶಿಬಿರದಲ್ಲಿ ನಡೆದಿದೆ.

ಗುಂಡು ಹಾರಿಸಿಕೊಂಡ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಜಿತೇಂದರ್ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಅವರ ಪತ್ನಿ ಮತ್ತು ಅತ್ತಿಗೆಯನ್ನು ರಾಕ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರೂ ಅಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಸಿಸ್ಟೆಂಟ್ ಕಮೀಷನರ್(ಮನೇಸರ್) ಧರಮಂಬೀರ್ ಸಿಂಗ್ ಹೇಳಿದ್ದಾರೆ.

ಅಯೋಧ್ಯೆ ಪ್ರಕರಣ ವಿಚಾರಣೆ ಮುಂದೂಡಿದ ಸುಪ್ರೀಂ

ಕಮ್ಯಾಂಡೋ ಹೀಗೆ ಮಾಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಬಿಎಸ್ಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಂದರ್ ಅವರನ್ನು ಮನೇಸರ್ ನಲ್ಲಿ ನಿಯೋಜನೆ ಮಾಡಲಾಗಿತ್ತು.

Get Latest updates on WhatsApp. Send ‘Subscribe’ to 8550851559