ಅಬಕಾರಿ ಸಚಿವರ ಕಾಮಾಯಣ? – News Mirchi

ಅಬಕಾರಿ ಸಚಿವರ ಕಾಮಾಯಣ?

ಸಿದ್ದು ಸಂಪುಟದ ಸಚಿವರೊಬ್ಬರ ಮೇಲೆ ಸಹಾಯ ಯಾಚಿಸಿ ಬಂದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿಯ ಸಿಡಿ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಹಾಯ ಕೇಳಿಕೊಂಡು ಬಂದಿದ್ದ 24 ವರ್ಷದ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಅಬಕಾರಿ ಸಚಿವರ ಎಚ್.ವೈ.ಮೇಟಿ ಮೇಲೆ ಆರೋಪ ಕೇಳಿ ಬಂದಿದೆ. ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದ್ದು, ಆ ಸಿಡಿಗಾಗಿ ಅಬಕಾರಿ ಸಚಿವರ ಪರವಾಗಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಎಂಬುವವರಿಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

ತಮಗೆ ಬಂದ ಬೆದರಿಕೆ ಕರೆಯನ್ನು ರೆಕಾರ್ಡ್ ಮಾಡಿದ್ದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಹಣ ತಗೊಳ್ಳಿ, ಸಿಡಿ ಬಿಡುಗಡೆ ಮಾಡಬೇಡಿ, ಬಿಡುಗಡೆ ಮಾಡಿದ್ದೇ ಆದರೆ ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಚೆನ್ನಾಗಿರಲ್ಲ ಎಂಬಂತೆ ರಾಜಶೇಖರ್ ಅವರಿಗೆ ಬೆದರಿಕೆ ಒಡ್ಡಲಾಗಿದೆ.

ಈ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಬಯಸಿದಾಗ, ತಮಗೆ ಅದರ ಮಾಹಿತಿ ಇಲ್ಲ, ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache