500 ರೂಪಾಯಿಗೇ ಕ್ರೆಡಿಟ್ ಕಾರ್ಡ್ ವಿವರ ಖರೀದಿಸಿ ಹಣ ಲಪಟಾಯಿಸುತ್ತಿದ್ದ ಕದೀಮರು – News Mirchi

500 ರೂಪಾಯಿಗೇ ಕ್ರೆಡಿಟ್ ಕಾರ್ಡ್ ವಿವರ ಖರೀದಿಸಿ ಹಣ ಲಪಟಾಯಿಸುತ್ತಿದ್ದ ಕದೀಮರು

ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದ್ದು ಖಾತೆಗಳಿಂದ ಹಣ ದೋಚುವ ಸೈಬರ್ ಕ್ರಿಮಿನಲ್ ಗಳು ಹೆಚ್ಚಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶ ಪೊಲೀಸ್ ಸೈಬರ್ ಕ್ರೈಂ ವಿಭಾಗವು ಅಂತರಾಷ್ಟ್ರೀಯ ಗ್ಯಾಂಗ್ ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತರನ್ನು ರಾಮ್ ಕುಮಾರ್ ಪಿಳ್ಳೈ, ರಾಮ್ ಪ್ರಸಾದ್ ನಾಡರ್ ಎಂದು ಗುರುತಿಸಲಾಗಿದೆ.

ಹ್ಯಾಕ್ ಮಾಡಿದ ಕ್ರೆಡಿಟ್ ಕಾರ್ಡ್ ವಿವರಗಳನ್ನು ಇವರನ್ನು ಆನ್ಲೈನ್ ನಲ್ಲಿ ಖರೀದಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಿ ಖರೀದಿಸಿದ ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸಿ ದೊಡ್ಡ ಮೊತ್ತದ ಖರೀದಿಗಳನ್ನು ಮಾಡುತ್ತಿದ್ದರು ಮತ್ತು ವಿದೇಶೀ ಪ್ರಯಾಣಗಳನ್ನು ಮಾಡಿ ಮಜಾ ಮಾಡುತ್ತಿದ್ದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇವರಿಗೆ ಕ್ರೆಡಿಟ್ ಕಾರ್ಡ್ ವಿವರಗಳು ಸಿಕ್ಕಿದ್ದು ಹೇಗೆ?

ಡಾರ್ಕ್ ವೆಬ್ ಮೂಲಕ ಹ್ಯಾಕ್ ಮಾಡಿ ಸಂಗ್ರಹಿಸಲಾದ ವಿವರಗಳನ್ನು ಇವರು ಆನ್ಲೈನ್ ನಲ್ಲಿಯೇ ಖರೀದಿಸುತ್ತಿದ್ದರಂತೆ. ಪ್ರತಿ ಕ್ರೆಡಿಟ್ ಕಾರ್ಡ್ ವಿವರಗಳಿಗೆ ರೂ.500 ರಿಂದ 800 ವರೆಗೂ ನೀಡುತ್ತಿದ್ದರು. ಹೀಗೆ ವಿವರಗಳನ್ನು ಖರೀದಿಸುವಾಗ ಹಣವನ್ನು ಬಿಟ್ ಕಾಯಿನ್ ರೂಫದಲ್ಲಿ ಪಾವತಿಸುತ್ತಿದ್ದರು ಎಂದು ಸೈಬರ್ ಸೆಲ್ಸ್ ಇಂಡೋರ್ ಯೂನಿಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಪಾಕ್ ವ್ಯಕ್ತಿಯ ಗ್ಯಾಂಗ್ ಪರ ಕೆಲಸ ಮಾಡುತ್ತಿದ್ದರು

ಮುಂಬೈ ಮೂಲದ ಈ ಇಬ್ಬರು ವ್ಯಕ್ತಿಗಳು ಪಾಕಿಸ್ತಾನದ ಶೇಖ್ ಅಫ್ಜಲ್ ಕಾ ಶೋಜಿ ನಡೆಸುವ ಅಂತರಾಷ್ಟ್ರೀಯ ಗ್ಯಾಂಗ್ ಪರವಾಗಿ ಕೆಲಸ ಮಾಡುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಲಾಹೋರ್ ನ ಶೋಜಿ, ಈಗಾಗಲೇ ವಿಶ್ವಾದ್ಯಂತ ಹಲವು ದೇಶಗಳನ್ನು ಭೇಟಿ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ನಾದರ್, ಪಿಳ್ಳೈರೊಂದಿಗೆ ಶೋಜಿ ಸ್ಕೈಪ್ ನಲ್ಲಿ ಸಂಪರ್ಕದಲ್ಲಿದ್ದಾನೆ ಎಂದು ಅವರು ಹೇಳಿದ್ದಾರೆ.

[ಇದನ್ನೂ ಓದಿ: ತಾಜ್ ಮಹಲ್ ವಿವಾದ: ಪ್ರಧಾನಿ ಹೇಳಿದ್ದೇನು?]

ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸಿ ದುಬಾರಿ ವಸ್ತುಗಳನ್ನು ಖರೀದಿಸುವುದು, ಬ್ಯಾಂಕ್ಯಾಂಕ್, ಥಾಯ್ಲೆಂಡ್, ದುಬೈ, ಹಾಂಕಾಂಗ್, ಮಲೇಷ್ಯಾ ಮುಂತಾದ ದೇಶಗಳಿಗೆ ವಿಮಾನ ಟಿಕೆಟ್ ಖರೀದಿಸಿರುವುದು ತಿಳಿದುಬಂದಿದೆ ಎಂದು ಎಸ್ಪಿ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!