ಲವ್ ಜಿಹಾದ್ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಹದಿಯಾ ಪತಿಗೆ ಉಗ್ರರ ಸಂಪರ್ಕವಿದೆ ಎಂದ ಎನ್.ಐ.ಎ

ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರವಾದ ಕೇರಳದ ಯುವತಿ ಅಖಿಲಾ ಅಶೋಕನ್ ಅಲಿಯಾಸ್ ಹದಿಯಾ ಪತಿ ಶಫೀನ್ ಜೆಹಾನ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್.ಐ.ಎ) ತನಿಖೆಯಿಂದ ತಿಳಿದು ಬಂದಿದೆ.

ಹದಿಯಾಳೊಂದಿಗೆ ಮದುವೆಯಾದ ಕೆಲ ತಿಂಗಳು ಮುಂಚೆ ಮನ್ಸೀದ್, ಸಫ್ವಾನ್ ಎಂಬ ಇಬ್ಬರು ವ್ಯಕ್ತಿಗಳೊಂದಿಗೆ ಎಸ್.ಡಿ.ಪಿ.ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸದಸ್ಯರನ್ನೊಳಗೊಂಡ ಕ್ಲೋಸ್ಡ್ ಫೇಸ್ಬುಕ್ ಗ್ರೂಪ್ ಮೂಲಕ ಶಫೀನ್ ಸಂಪರ್ಕದಲ್ಲಿದ್ದುದಾಗಿ ತಿಳಿದುಬಂದಿದೆ. ಇವರಿಬ್ಬರೂ ಇಸ್ಲಾಮಿಕ್ ಸ್ಟೇಟ್ ಒಮರ್ ಅಲ್ ಹಿಂದಿ ಪ್ರಕರಣದಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಸಂಸದ ಪ್ರತಾಪ್ ಸಿಂಹ ಟ್ವೀಟ್ ಗೆ ಚೆನ್ನಣ್ಣನವರ್ ಪ್ರತಿಕ್ರಿಯೆ

ಭಾರತದಲ್ಲಿ ಹೈಕೋರ್ಟ್ ನ್ಯಾಯಾಧೀಶರು, ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ಸ್ ನಿಂದ ಪ್ರಭಾವಿತರಾದವರು ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಗಳ ಬಂದ ನಂತರ ಎನ್.ಐ.ಎ ತನಿಖೆ ಆರಂಭಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಮನ್ಸೀದ್, ಸಫ್ವಾನ್ ರನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು. ಹದಿಯಾ-ಶಫೀನ್ ಮದುವೆ ನಡೆಯಲು ಕೂಡಾ ಇವರೇ ಕಾರಣವಿರಬಹುದು ಎಂದು ಎನ್.ಐ.ಎ ಶಂಕೆ ವ್ಯಕ್ತಪಡಿಸುತ್ತಿದೆ. ಕಾಲೇಜು ದಿನಗಳಿಂದಲೇ ಮನ್ಸೀದ್, ಸಫ್ವಾನ್ ರೊಂದಿಗೆ ಶಫೀನ್ ಗೆ ಉತ್ತಮ ಸಂಬಂಧವಿರುವುದಾಗಿ ಎನ್.ಐ.ಎ ತನಿಖೆಯಿಂದ ತಿಳಿದುಬಂದಿದೆ.

ಲವ್ ಜಿಹಾದ್ ಎಂದು ಹದಿಯಾ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನಮಗೆಲ್ಲಾ ತಿಳಿದದ್ದೇ. ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಶಫೀನ್ ನನಗೆ ಪರಿಚಯವಾದನೆಂದು, ಆ ಪರಿಚಯ ಪ್ರೀತಿಗೆ ಮರಳಿತು. ನಂತರ ಮದುವೆಯಾದೆವು ಎಂದು ಹದಿಯಾ ನ್ಯಾಯಾಲಯದಲ್ಲಿ ಹೇಳಿದ್ದಾಳೆ. ಆದರೆ ಈ ವಿವಾಹದ ಹಿಂದೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಸಂಚು ಅಡಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದರು.

ಟಿಪ್ಪು ಜಯಂತಿಗಿಲ್ಲದ ನಿರ್ಬಂಧ ಹನುಮ ಜಯಂತಿಗೇಕೆ

ಹೀಗಾಗಿ ಹದಿಯಾಳಿಗೆ ಗೃಹಬಂಧನವಿಧಿಸಿದ್ದರು. ಸದ್ಯ ಆಕೆ ಈಗ ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿದ್ದಾಳೆ. ಹದಿಯಾಳನ್ನು ಕೂಡಲೇ ಕಾಲೇಜಿಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಹದಿಯಾ ಸೇಲಂ ನಲ್ಲಿನ ಹೋಮಿಯೋಪತಿ ಕಾಲೇಜಿನಲ್ಲಿ ಸೇರಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಆಕೆಯ ಪತಿಯನ್ನು ಭೇಟಿ ಮಾಡಲು ಮಾತ್ರ ಕಾಲೇಜು ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ.

Get Latest updates on WhatsApp. Send ‘Add Me’ to 8550851559