ಹಾಫ್ ಟನ್ ಕಿಲ್ಲರ್ ಮಹಿಳೆಯ ತೂಕ ಇಳಿಯಲು ಕಾರಣವಾದ ಘಟನೆ – News Mirchi

ಹಾಫ್ ಟನ್ ಕಿಲ್ಲರ್ ಮಹಿಳೆಯ ತೂಕ ಇಳಿಯಲು ಕಾರಣವಾದ ಘಟನೆ

453 ಕೆಜಿ ತೂಕದ ದೇಹವನ್ನು ಹೊತ್ತು ಒಂದು ಕೊಠಡಿಗೆ ಸೀಮಿತವಾಗಿದ್ದ ಮಹಿಳೆಯೊಬ್ಬಳು ಹಾಫ್ ಟನ್ ಕಿಲ್ಲರ್ ಎಂದೇ ಪ್ರಸಿದ್ಧಳಾದವಳು. ಆದರೆ ಮಾಡದ ತಪ್ಪಿಗೆ ಆಕೆಯ ಮೇಲೆ ಬಂದ ಒಂದು ಕೊಲೆ ಆರೋಪದಿಂದ ನೊಂದ ಆಕೆ ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಲೇ ಬೇಕು ಎಂದು ತೀರ್ಮಾನಿಸಿ, ಕೊನೆಗೂ ತನ್ನ ತೂಕ ಇಳಿಸಿಕೊಂಡಿದ್ದಾಳೆ. 453 ಕೆಜಿ ತೂಕವಿದ್ದ ಆಕೆ ಈಗ ಕೇವಲ 90 ಕೆಜಿಗೆ ಇಳಿದಿದ್ದಾಳೆ.

ಟೆಕ್ಸಾಸ್ ನ ಮೇರಾ ರೊಸೆಲ್ಸ್ (34) ಎಂಬ ಮಹಿಳೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ತೂಕವುಳ್ಳ ಮಹಿಳೆಯಾಗಿದ್ದಳು. ಹಾಫ್ ಟನ್ ಕಿಲ್ಲರ್ ಎಂದೂ ಜನ ಗುರುತಿಸುತ್ತಾರೆ. ಆದರೆ ತನ್ನ ಜೀವನದಲ್ಲಿ ನಡೆದ ಆ ಘಟನೆ ಆಕೆ ತನ್ನ ದೇಹದ ತೂಕದ ಬಗ್ಗೆ ಚಿಂತಿಸುವಂತೆ ಮಾಡಿ, ತೂಕ ಇಳಿಸಿಕೊಳ್ಳಲು ಪರೋಕ್ಷವಾಗಿ ಕಾರಣವಾಯಿತು.

ಮೇರಾ ರೋಸೆಲ್ಸ್ ಗೆ ಒಬ್ಬ ಸಹೋದರಿಯಿದ್ದಾಳೆ, ಜೇಮಿ ರೋಸೆಲ್ಸ್ ಎಂದು ಆಕೆಯ ಹೆಸರು. ಅದೊಂದು ದಿನ ಜೇಮಿ ತನ್ನ ಮಗನನ್ನು ಯಾವುದೋ ಕಾರಣಕ್ಕೆ ಹೊಡೆದಿದ್ದರಿಂದ ಮಗ ಸಾವನ್ನಪ್ಪಿದ. ಹತ್ಯೆ ಕೇಸು ತನ್ನ ಮೇಲೆ ಬರುತ್ತದೆಂದು ಗಾಭರಿಗೊಂಡ ಜೇಮಿ, ತಾನು ಪಾರಾಗಲು ಇರುವುದೊಂದೇ ದಾರಿ, ಅದು ಕೊಲೆ ಆರೋಪವನ್ನು ತನ್ನ ಸಹೋದರಿಯ ಮೇಲೆ ಹಾಕುವುದು ಎಂದು ಯೋಚಿಸಿದಳು. ನನ್ನ ಮಗನ ಮೇಲೆ ಮೇರಾ ಕೂತಿದ್ದರಿಂದ ಆ ತೂಕ ತಾಳಲಾರದೆ ನನ್ನ ಮಗ ಸತ್ತ ಎಂದು ಪೊಲೀಸರಿಗೆ ಮತ್ತು ಕೊರ್ಟಿಗೆ ಹೇಳಿದಳು. ಕೊನೆಗೆ ತಾನಿನ್ನೇನೂ ಮಾಡಲು ಸಾಧ್ಯವಾಗದೆ ಮಾಡದ ಕೊಲೆಯನ್ನು ಒಪ್ಪಿಕೊಳ್ಳಲು ಮೇರಾ ಸಿದ್ಧಳಾಗುತ್ತಿದ್ದ ಹಂತದಲ್ಲಿ, ಮೇರಾ ಈ ಕೊಲೆ ಮಾಡಿಲ್ಲ ಎಂಬ ವರದಿಗಳು ಬಂದವು. ಮಗುವನ್ನು ಕೊಂದಿದ್ದಲ್ಲದೆ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆದಿದ್ದಕ್ಕೆ ಜೇಮಿಗೆ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜೈಲಿಗೆ ಹೋದ ತನ್ನ ಸಹೋದರಿ ಜೇಮಿಯ ಮಕ್ಕಳನ್ನು ನೋಡಿಕೊಳ್ಳಬೇಕೆಂದರೆ ತಾನು ಆರೋಗ್ಯದಿಂದ ಇರಬೇಕು ಎಂದು ಯೋಚಿಸಿದ ಮೇರಾ, ವೈದ್ಯರ ಬಳಿ ಕೆಲ ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಎಲ್ಲರೂ ಹೌಹಾರುವಂತೆ 363 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. ಈಗ ತನ್ನ ಸಹೋದರಿಯ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಈಕೆ ಮದುವೆ ಮಾಡಿಕೊಂಡು ಸಂತೋಷವಾಗಿದ್ದಾಳೆ. ತೂಕದ ಕಾರಣದಿಂದಲೇ ಮಾಡದ ಕೊಲೆಗೆ ಜೈಲಿಗೆ ಹೋಗುವ ಪರಿಸ್ಥಿತಿ ಸೃಷ್ಟಿಯಾದ್ದರಿಂದ ತನ್ನ ತೂಕದಲ್ಲಿ ಹೇಗೆ ಬದಲಾವಣೆಗೆ ಕಾರಣವಾಯಿತು ಎಂದು ವಿವರಿಸಿದ್ದಾಳೆ.

Loading...

Leave a Reply

Your email address will not be published.