25 ನಿಮಿಷದ ಮುಖೇಶ್ ಭಾಷಣಕ್ಕೆ ತತ್ತರಿಸಿದ ಏರ್ಟೆಲ್, ಐಡಿಯಾ ಷೇರುಗಳು

ಮುಂಬೈ: ಜಿಯೋ ಉಚಿತ ಆಫರ್ ಅನ್ನು ವಿಸ್ತರಿಸಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಾಡಿದ ಕೇವಲ 25 ನಿಮಿಷದ ಭಾಷಣದಿಂದ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳ ಷೇರುಗಳು ಪತನಗೊಂಡಿವೆ. ಪತನಗೊಂಡ ಷೇರುಗಳ ಮೌಲ್ಯ ಸುಮಾರು ರೂ. 3 ಸಾವಿರ ಕೋಟಿ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ‘ರಿಲಯನ್ಸ್ ಜಿಯೋ’ ಆಗಮನ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುವ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗಿದೆ. ಡಿಸೆಂಬರ್ 30 ರವರೆಗೆ ಉಚಿತ ವಾಯ್ಸ್ ಕಾಲ್ಸ್, ಡೇಟಾ ಆಫರ್ ಘೋಷಣೆಯಾದ ನಂತರ ಜನ ಜಿಯೋ ಸಿಮ್ ಗಳಿಗಾಗಿ ಸಾಲುಗಟ್ಟಿ ನಿಂತರು.

ಇದೀಗ ಈ ಕೊಡುಗೆಯನ್ನು ‘ಹ್ಯಾಪಿ ನ್ಯೂ ಇಯರ್’ ಎಂಬ ಹೆಸರಿನಲ್ಲಿ 2017 ರವರೆಗೆ ವಿಸ್ತರಿಸುತ್ತಿರುವುದಾಗಿ ಮುಖೇಶ್ ಅಂಬಾನಿ ಪ್ರಕಟಿಸಿದರು. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಅವರು 25 ನಿಮಿಷಗಳ ಕಾಲ ಭಾಷಣ ಮಾಡಿದರು.

ಡಿಸೆಂಬರ್ 4 ರಿಂದ ಜಿಯೋ ಹೊಸ ಚಂದಾದಾರರು ಕೂಡಾ ‘ಹ್ಯಾಪಿ ನ್ಯೂ ಇಯರ್’ ಹೆಸರಿನ ಆಫರ್ ನೊಂದಿಗೆ ಉಚಿತ ಡೇಟಾ, ವಾಯ್ಸ್ ಕಾಲ್ಸ್ ಅನ್ನು 2017 ರ ಮಾರ್ಚ್ 31 ರವರೆಗೆ ಬಳಸಿಕೊಳ್ಳಬಹುದು. ಹಳೆಯ ಚಂದಾದಾರರಿಗೂ ಇದು ಅನ್ವಯಿಸುತ್ತದೆ’ ಎಂದು ಪ್ರಕಟಿಸಿದರು.

ಮುಖೇಶ್ ಅಂಬಾನಿ ಪ್ರಕಟಣೆ ದೇಶೀಯ ಮಾರುಕಟ್ಟೆಯಲ್ಲಿ ಅದರಲ್ಲೂ ಮುಖ್ಯವಾಗಿ ಪ್ರತಿಸ್ಪರ್ಧಿ ಟೆಲಿಕಾಂ ಷೇರುಗಳಿಗೆ ಆಘಾತ ತಂದೊಡ್ಡಿದೆ.

airtel1ಮಧ್ಯಾಹ್ನ 1:30 ರ ಸಮಯದಲ್ಲಿ ಏರ್ಟೆಲ್ ಷೇರು ರೂ.324 ಬಳಿ ಟ್ರೇಡ್ ಅಗುತ್ತಿದ್ದಾಗ ಮುಖೇಶ್ ಭಾಷಣ ಆರಂಭವಾಯಿತು. ಆದರೆ 2 ಗಂಟೆಯ ವೇಳೆಗೆ ರೂ. 318 ಕ್ಕೆ ಕುಸಿಯಿತು. ಈ ಒಟ್ಟು ಪತನಗೊಂಡ ಮಾರುಕಟ್ಟೆ ಬೆಲೆ ₹2,276 ಕೋಟಿ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ.

idea_cellular_logo-svgಅಂಬಾನಿ ಪ್ರಕಟಣೆಯಿಂದ ಐಡಿಯಾ ಸೆಲ್ಯಲಾರ್ ಷೇರುಗಳಲ್ಲೂ ಕುಸಿತ ಕಂಡಿದೆ. ಭಾಷಣಕ್ಕೆ ಮೊದಲು ₹76.60 ಬಳಿ ಟ್ರೇಡ್ ಆಗುತ್ತಿದ್ದ ಷೇರುಗಳು 2:30 ರ ವೇಳೆಗೆ ₹74.20 ಕ್ಕೆ ಕುಸಿಯಿತು. ಇದರ ಒಟ್ಟು ಮೌಲ್ಯ ₹864 ಕೋಟಿ ಇರಬಹುದು ಎನ್ನುತ್ತಿದ್ದಾರೆ.

ರಿಲಯನ್ಸ್ ಜಿಯೋ ಆರಂಭವಾದ ಮೂರು ತಿಂಗಳುಗಳಲ್ಲಿಯೇ 5 ಕೋಟಿ ಚಂದಾದಾರರನ್ನು ಆಕರ್ಷಿಸಿದೆ. ಶೀಘ್ರದಲ್ಲಿಯೇ ನಗದು ರಹಿತ ಟ್ರಾನ್ಸಾಕ್ಷನ್ಸ್ ಕೂಡಾ ಆರಂಭಿಸುವುದಾಗಿ ಮುಖೇಶ್ ಹೇಳಿದ್ದಾರೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache