ಪಾಂಡ್ಯಾ ನನಗಿಂತ ಉತ್ತಮ ಆಟಗಾರ |News Mirchi

ಪಾಂಡ್ಯಾ ನನಗಿಂತ ಉತ್ತಮ ಆಟಗಾರ

ಭಾರತ ಕ್ರಿಕೆಟ್ ತಂಡದ ಹೊಸ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯಾ ಮೇಲೆ ಪ್ರಶಂಸೆಗಳ ಸುರಿಮಳೆ ಮುಂದುವರೆದಿದೆ. ಆಕ್ರಮಣಕಾರಿ ಆಟದಿಂದಾಗಿ ಸಿಕ್ಸರ್ ಸಿಡಿಸುವ ಪಾಂಡ್ಯಾ ಅಭಿಮಾನಿ ಬಳಗದಲ್ಲಿ ಭಾರತದ ಮಾಜಿ ಭಾರತೀಯ ಆಲ್ರೌಂಡರ್ ಕಪಿಲ್ ದೇವ್ ಸೇರ್ಪಡೆಯಾಗಿದ್ದಾರೆ. ಇಂದೋರ್ ಏಕದಿನ ಪಂದ್ಯದಲ್ಲಿ ಮಿಂಚಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಾರ್ಧಿಕ್ ಪಾಂಡ್ಯಾ ಅವರನ್ನು ಮಾಜಿ ಆಟಗಾರ ಕಪಿಲ್ ದೇವ್ ಪ್ರಶಂಸಿಸಿದ್ದಾರೆ.

“ಹಾರ್ಧಿಕ್ ಪಾಂಡ್ಯಾ ತನಗಿಂತ ಉತ್ತಮ ಆಟಗಾರ. ಆತ ಈ ಮಟ್ಟಕ್ಕೆ ಬೆಳೆಯಲು ತುಂಬಾ ಶ್ರಮ ಪಟ್ಟಿದ್ದಾನೆ. ಹೆಚ್ಚು ಮಾತಾಡು ಆತನ ಮೇಲೆ ಅನಗತ್ಯ ಒತ್ತಡ ತರುವುದಿಲ್ಲ. ಉತ್ತಮ ಆಟಗಾರನಾಗಿ ತಾನೇನೆಂದು ತೋರಿಸುವ ಸಾಮರ್ಥ್ಯ ಆತನಿಗಿದೆ” ಎಂದು ಕಪಿಲ್ ಹೇಳಿದ್ದಾರೆ.

[ಇದನ್ನೂ ಓದಿ: ಬೇಕೆಂದೇ ಆತನನ್ನು ಟಾರ್ಗೆಟ್ ಮಾಡಿದೆವು : ಹಾರ್ಧಿಕ್ ಪಾಂಡ್ಯಾ]

ಮೊದಲ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್

ಪಾಂಡ್ಯಾನನ್ನು ಮತ್ತೊಬ್ಬ ಕಪಿಲ್ ದೇವ್ ಎಂದು ಗುರುತಿಸುತ್ತಿರುವ ಸಂದರ್ಭದಲ್ಲಿ ಸ್ವತಃ ಕಪಿಲ್ ದೇವ್, ತನಗಿಂತ ಪಾಂಡ್ಯಾ ಉತ್ತಮ ಆಟಗಾರ ಎಂದು ಸರ್ಟಿಫಿಕೇಟ್ ನೀಡಿರುವುದು ಮಹತ್ವ ಪಡೆದಿದೆ. ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ಮ್ಯಾನ್ ಆಫ್ ದ ಮ್ಯಾಚ್ ಪಡೆದ ಅಪರೂಪದ ಆಟಗಾರರಲ್ಲಿ ಹಾರ್ಧಿಕ್ ಪಾಂಡ್ಯಾ ಕೂಡಾ ಒಬ್ಬರು. ಕಳೆದ ಅಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಾದಾರ್ಪಣೆ ಮಾಡಿದ ಪಾಂಡ್ಯಾ, ಆ ಪಂದ್ಯದಲ್ಲಿಯೇ ಮ್ಯಾನ್ ಆಫ್ ದ ಮ್ಯಾಚ್ ಪಡೆದರು. ಇನ್ನು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮ್ಯಾನ್ ಆಫ್ ದ ಮ್ಯಾಚ್ ಆಗಿ ನಿಂತರು.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!