ಉತ್ತರಖಂಡದ ಕಾಂಗ್ರೆಸ್ ಬಾಹುಬಲಿ! – News Mirchi

ಉತ್ತರಖಂಡದ ಕಾಂಗ್ರೆಸ್ ಬಾಹುಬಲಿ!

ಶೀಘ್ರದಲ್ಲೇ ಐದು ರಾಜ್ಯಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ವಿವಿಧ ರೀತಿಯ ಪ್ರಯತ್ನಗಳಿಗೆ ಮುಂದಾಗಿವೆ. ಉತ್ತರಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಒಂದು ಹೆಜ್ಜೆ ಮುಂದೆ ಹೋಗಿ ವಿಚಿತ್ರ ಪ್ರಯೋಗವನ್ನೇ ಮಾಡಿದ್ದಾರೆ. ವಿಶ್ವಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಹಾಡಿನಲ್ಲಿ ಹರೀಶ್ ರಾವತ್ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಕಾಂಗ್ರೆಸ್ ಸಿದ್ಧಪಡಿಸಿದ್ದು, ಸ್ವತಃ ಹರೀಶ್ ರಾವತ್ ಅವರೇ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ

ಬಾಹುಬಲಿ ಚಿತ್ರದ ಹಾಡಿನಲ್ಲಿ ನಾಯಕ ಪ್ರಭಾಸ್ ಶಿವಲಿಂಗವನ್ನು ಮೈಮೇಲೆ ಹೊರುವ ಹಾಡಿನ್ನೇ ಎಡಿಟ್ ಮಾಡಿ ಹರೀಶ್ ರಾವತ್, ಮೋದಿ, ಅಮಿತ್ ಷಾ ಮುಂತಾದವರ ಮುಖಗಳನ್ನು ಮಾತ್ರ ಸೇರಿಸಿದ್ದಾರೆ. ಚಿತ್ರದಲ್ಲಿ ಶಿವಲಿಂಗವನ್ನು ನಾಯಕ ಭುಜದ ಮೇಲೆ ಹೊತ್ತರೆ, ಈ ಕಾಂಗ್ರೆಸ್ ನಾಯಕ ಮಾತ್ರ ಉತ್ತರಖಂಡ ರಾಜ್ಯವನ್ನೇ ಎತ್ತಿದ್ದಾರೆ. ಕೆಳಗಿನ ವೀಡಿಯೋ ನೋಡಿ…

Loading...

Leave a Reply

Your email address will not be published.