ಪುನೀತ್ ರಿಮೇಕ್ ಚಿತ್ರಕ್ಕೆ ಹರ್ಷ ನಿರ್ದೇಶನ |News Mirchi

ಪುನೀತ್ ರಿಮೇಕ್ ಚಿತ್ರಕ್ಕೆ ಹರ್ಷ ನಿರ್ದೇಶನ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಹರ್ಷ, ಇದೀಗ ಪುನೀತ್ ರಾಜ್ ಕುಮಾರ್ ಚಿತ್ರ ನಿರ್ದೇಶಿಸುತ್ತಿದ್ದಾರಂತೆ. ತಮಿಳಿನ ಪೂಜೈ ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದಾರೆ. ಅಸಲಿಗೆ ಈ ಚಿತ್ರದಲ್ಲಿ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಾರೆ ಎನ್ನಲಾಗುತ್ತಿತ್ತು. ಆದರೆ ಈಗ ಪುನೀತ್ ನಟಿಸುವುದು ಪಕ್ಕಾ ಆಗಿದೆ.

ಇದುವರೆಗೂ ಪುನೀತ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ನಟಿಯರು ಈ ಚಿತ್ರದಲ್ಲಿರುವುದಿಲ್ಲವಂತೆ. ಹೆಚ್ಚಾಗಿ ಹೊಸ ಪ್ರತಿಭೆಗಳಿಗೆ ಅವಕಾಶ. ಹಾಗಾಗಿಯೇ ಇದುವರೆಗೂ ಪುನೀತ್ ಬಿಟ್ಟರೆ ಇನ್ಯಾರನ್ನೂ ಇನ್ನೂ ಚಿತ್ರಕ್ಕೆ ಆಯ್ಕೆ ಮಾಡಿಲ್ಲ.

ಚಿತ್ರದ ಟೆಕ್ನಿಕಲ್ ವಿಭಾಗದಲ್ಲೂ ನಲ್ಲೂ ನಿರ್ದೇಶಕರ ಜೊತೆ ಇದುವರೆಗೂ ಕೆಲಸ ಮಾಡಿದ ತಂಡವೇ ಕೆಲಸ ಮಾಡಲಿದೆ.

Loading...
loading...
error: Content is protected !!