ಎರಡು ಪ್ರಕರಣಗಳಲ್ಲಿ ಬಾಬಾ ರಾಮ್ ಪಾಲ್ ದೋಷಮುಕ್ತ

View Later

ವಿವಾದಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ಪಾಲ್ ಅವರನ್ನು ಹರಿಯಾಣದ ಹಿಸ್ಸಾರ್ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ದೋಷಮುಕ್ತಗೊಳಿಸಿದೆ. ರಾಮ್ ಪಾಲ್ ವಿರುದ್ಧ ಗಲಭೆಗೆ ಪ್ರಚೋದನೆ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎರಡು ದೂರು ದಾಖಲಾಗಿದ್ದವು. 2014 ರಿಂದ ರಾಮ್ ಪಾಲ್ ಹಿಸ್ಸಾರ್ ನಲ್ಲಿ ಜೈಲಿನಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಬರ್ವಾಲಾದಲ್ಲಿ ರಾಮ್ ಪಾಲ್ ಅವರ ಸಾವಿರಾರು ಅನುಯಾಯಿಗಳು ಪೊಲೀಸರು ಮತ್ತು ಅರೆಸೇನಾಪಡೆಗಳ ಮೇಲೆ ಘರ್ಷಣೆಗಿಳಿದ್ದರು. ಈ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದ್ದರು.

ಬಾಬಾ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಲು ಪೊಲೀಸರು ವಿಫಲರಾಗಿದ್ದರಿಂದ ರಾಮ್ ಪಾಲ್ ಅವರನ್ನು ಕೋರ್ಟ್ ನಿರಪರಾಧಿ ಎಂದು ತೀರ್ಮಾನಿಸಿದೆ. ಅವರ ಮೇಲೆ ದೇಶದ್ರೋಹ ಮತ್ತು ಕೊಲೆ ಆರೋಪ ಮತ್ತಿತರೆ ಪ್ರಕರಣಗಳು ಬಾಕಿ ಇರುವುದರಿಂದ ಅವರು ಜೈಲಿನಲ್ಲಿಯೇ ಉಳಿಯಲಿದ್ದಾರೆ. [ಇದನ್ನೂ ಓದಿ:ಡೇರಾ ಸಚ್ಚಾ ಸೌದಾದಿಂದ ರೂ.200 ಕೋಟಿ ನಷ್ಟ ವಸೂಲಿಗೆ ಬಿಲ್ ತಯಾರಿಸಿದ ಪಂಜಾಬ್]

ಮತ್ತೊಂದೆಡೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ವಿರುದ್ಧ ಕೋರ್ಟ್ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಬಾಬಾ ರಾಮ್ ಪಾಲ್ ಪ್ರಕರಣದಲ್ಲಿ ಇದು ಮರುಕಳೀಸಬಾರದು ಎಂದು ಹರಿಯಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.