ಪ್ರತಿ ಹಿಂದೂ 10 ಮಕ್ಕಳನ್ನು ಹೆರಬೇಕು, ದೇವರಿದ್ದಾನೆ

***

ನಾಗಪುರ್: ಪ್ರತಿ ಹಿಂದೂ ಹತ್ತು ಮಕ್ಕಳಿಗೆ ಜನ್ಮ ನೀಡಿ, ಅವರ ಭಾರ ದೇವರು ನೋಡಿಕೊಳ್ಳುತ್ತಾನೆ ಎಂದು ಹಿಂದೂ ಆಧ್ಯಾತ್ಮಿಕ ಗುರು ವಾಸುದೇವಾನಂದ ಸರಸ್ವತಿ ಹೇಳಿದ್ದಾರೆ. ದೇಶದಲ್ಲಿ ಇನ್ನೂ ಹಿಂದೂಗಳ ಸಂಖ್ಯೆ ಹೆಚ್ಚಬೇಕು ಎಂದು ಅಭಿಪ್ರಾಯ ಪಟ್ಟರು.

ನಾಗಪುರದಲ್ಲಿ ಧರ್ಮ ಸಂಸ್ಕೃತಿ ಮಹಾಕುಂಭ ಹೆಸರಿನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ‘ಹಿಂದೂಗಳನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಆಗಮಿಸಿದ ಸ್ವಾಮೀಜಿಗಳು ಹಿಂದೂ ಸಮುದಾಯ ಈಗಿರುವುದಕ್ಕಿಂತ ದ್ವಿಗುಣವಾಗಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ವಿಹೆಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಜ್ಯೋತಿರ್ಮಠದ ವಾಸುದೇವಾನಂದ ಸರಸ್ವತಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಸುದೇವಾನಂದ, ‘ಇಬ್ಬರು ಮಕ್ಕಳನ್ನೇ ಹೆರಬೇಕೆಂಬ ನಿರ್ಬಂಧವನ್ನು ಪಕ್ಕಕ್ಕಿಟ್ಟು ಹತ್ತಯ ಮಕ್ಕಳನ್ನು ಪಡೆಯಿರಿ. ಅವರ ಕುರಿತು ಚಿಂತಿಸಬೇಡಿ. ಅವರ ರಕ್ಷಣೆಯನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದರು.