ಒಬ್ಬೊಬ್ಬರು ಐದೈದು ಮಕ್ಕಳನ್ನು ಹೆರಬೇಕು!

ಹೆಚ್ಚು ಹೆಚ್ಚು ಮಕ್ಕಳನ್ನು ಹೆರಲು ನಮ್ಮ ದೇಶದಲ್ಲಿ ಕೆಲವರು ಆಗಾಗ ಕರೆ ನೀಡಿ ಸುದ್ದಿಯಾಗುತ್ತಿರುತ್ತಾರೆ. ಇದೇ ರೀತಿಯ ಕರೆಯೊಂದನ್ನು ಟರ್ಕಿ ಅಧ್ಯಕ್ಷರು ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ. ಟರ್ಕಿಯ ದಂಪತಿಗಳು ಐದೈದು ಮಕ್ಕಳನ್ನು ಹೆರುವಂತೆ ಟರ್ಕಿ ಅಧ್ಯಕ್ಷ ಎರ್ಡೋಗಾನ್ ತನ್ನ ದೇಶದ ಪ್ರಜೆಗಳಿಗೆ ಕರೆ ನೀಡಿದ್ದಾರೆ. ಹಾಗೆ ಮಾಡುವ ಮೂಲಕ ಭವಿಷ್ಯತ್ತಿನಲ್ಲಿ ಯೂರೋಪ್ ನಲ್ಲಿ ಟರ್ಕಿ ಜನರದ್ದೇ ಮೇಲುಗೈ ಆಗುತ್ತದೆ ಎಂದು ಹೇಳಿದ್ದಾರೆ. ರ‌್ಯಾಲಿಯಲ್ಲಿ ಪಾಲ್ಗೊಂಡು ನೀಡಿದ ಅವರ ಹೇಳಿಕೆ ಈಗ ಚರ್ಚಾಸ್ಪದವಾಗಿದೆ.

ಜನಸಂಖ್ಯೆ ನಿಯಂತ್ರಣಕ್ಕೆ ಹಲವು ಕ್ರಮಗಳು ಕೈಗೊಳ್ಳುತ್ತಿದ್ದರೆ, ಇವರದೇನು ಹುಚ್ಚು ಹೇಳಿಕೆ ಎನ್ನುತ್ತಿದ್ದಾರೆ ಎಂಬ ಪ್ರಶ್ನೆ ಏಳಬಹುದು. ಅದಕ್ಕೊಂದು ಕಾರಣವೂ ಇದೆ. ಯೂರೋಪ್ ದೇಶಗಳಲ್ಲಿ ಟರ್ಕಿ ಜನರ ಮೇಲೆ ತಾರತಮ್ಯ ಹೆಚ್ಚಾಗುತ್ತಿದೆಯಂತೆ. ಈ ತಾರತಮ್ಯ ನಿವಾರಣೆಯಾಗಬೇಕೆಂದರೆ ತಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವುದೊಂದೇ ದಾರಿ ಎಂಬುದು ಅಧ್ಯಕ್ಷರ ಅಭಿಪ್ರಾಯ.

ಯೂರೋಪ್ ಗೆ ಹೋಗಿ, ಅಲ್ಲಿ ಐಷಾರಾಮಿ ಜೀವನ ಮಾಡಿ, ಹೊಸ ವ್ಯಾಪಾರ ಆರಂಭಿಸಿ, ಐಷಾರಾಮಿ ಕಾರುಗಳಲ್ಲಿ ಸುತ್ತಾಡಿ, ಐದೈದು ಮಕ್ಕಳನ್ನು ಪಡೆಯಿರಿ, ಆಗಲೇ ನಮ್ಮ ಜನಸಂಖ್ಯೆ ಹೆಚ್ಚಾಗುತ್ತದೆ. ಅದೇ ಯೂರೋಪ್ ನಲ್ಲಿ ನಮಗಾಗುತ್ತಿರುವ ಅನ್ಯಾಯಕ್ಜೆ ಸರಿಯಾದ ಪತಿಹಾರ ಎಂದು ಅವರು ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!