ಜೆಡಿಎಸ್ ಗೆಲುವಿಗಾಗಿ ಕಾಲಭೈರವೇಶ್ವರನಿಗೆ ಪೂಜೆ – News Mirchi

ಜೆಡಿಎಸ್ ಗೆಲುವಿಗಾಗಿ ಕಾಲಭೈರವೇಶ್ವರನಿಗೆ ಪೂಜೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗಾಗಿ ಹೆಚ್.ಡಿ.ರೇವಣ್ಣ ಕಾಲಭೈರವೇಶ್ವರನ ಮೊರೆ ಹೋಗಿದ್ದಾರೆ. ಪತ್ನಿ ಭವಾನಿ ರೇವಣ್ಣ ಅವರ ಜೊತೆ ರೇವಣ್ಣ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಮೂರು ಅಮಾವಾಸ್ಯೆಗಳ ಪೂಜೆ ನಡೆಸುತ್ತಿದ್ದಾರೆ.

ಈ ಹಿಂದೆಯೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮೂರು ಅಮಾವಾಸ್ಯೆಗಳ ಪೂಜೆಗಳನ್ನು ನೆರವೇರಿಸಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಕೂಡಾ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಪೂಜೆ ನಡೆಸಿದ್ದರು.

Contact for any Electrical Works across Bengaluru

Loading...
error: Content is protected !!