ಪತ್ನಿಯ ಶೀಲ ಶಂಕಿಸಿ ಕೊಂದು ತುಂಡು ತುಂಡು ಮಾಡಿ ಈತ ಮಾಡಿದ್ದೇನು ಗೊತ್ತೇ?

ಅಳ್ವಾರ್(ರಾಜಸ್ಥಾನ): ಪತ್ನಿಯ ಮೇಲಿನ ಅನುಮಾನದಿಂದ ದಾರುಣವಾಗಿ ಕೊಂದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಅಳ್ವಾರ್ ಮಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ವಿವರಗಳ ಪ್ರಕಾರ ಪತ್ನಿಯ ಶೀಲ ಶಂಕಿಸಿ ಪತಿ ಯೋಗೇಶ್ ಕಳೆದ ವಾರ ಆಕೆಯನ್ನು ಹತ್ಯೆ ಮಾಡಿ ಯಾರಿಗೂ ಅನುಮಾನ ಬಾರದಂತೆ ಮಾಡಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಗರದ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ.

ಆಕೆಯ ಕಾಲು ನಗರದಲ್ಲಿನ ಒಂದು ಪ್ರದೇಶದಲ್ಲಿ ಗುರುವಾರ ಲಭಿಸಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಾರನೆಯ ದಿನ ಎರಡು ಬೇರೆ ಬೇರೆ ಬ್ಯಾಗುಗಳಲ್ಲಿ ಎರಡು ಕೈಗಳು ಸಿಕ್ಕಿವೆ. ಏಳನೆಯ ದಿನ ಅಂತಿಮವಾಗಿ ಮಹಿಳೆಯ ತಲೆ ಮತ್ತೊಂದು ಬ್ಯಾಗಿನಲ್ಲಿ ಸಿಕ್ಕಿದೆ. ಹಂತಕ ಅಲ್ಲೇ ಸುತ್ತಮುತ್ತ ವಾಸಿಸುತ್ತಿರಬೇಕು ಎಂದು ಪೊಲೀಸರು ಅನುಮಾನಿಸಿದ್ದಾರೆ. ಹೀಗಾಗಿ ಪ್ರತಿ ಮನೆಯನ್ನೂ ಹುಡುಕಾಡಿದಾಗ 35 ವರ್ಷ ವಯಸ್ಸಿನ ಯೋಗೇಶ್ ಮಲ್ಹೋತ್ರಾ ಶಂಕಿತ ಎಂದು ಭಾವಿಸಿ ವಶಕ್ಕೆ ಪಡೆದರು. ಪತ್ನಿಯ ನಡುವಳಿಕೆಯ ಬಗ್ಗೆ ಅನುಮಾನದಿಂದ ಈ ಹತ್ಯೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಪಾರಸ್ ಜೈನ್ ಹೇಳಿದ್ದಾರೆ.