ಲಂಡನ್ ನಲ್ಲಿ ವಿಜಯ್ ಮಲ್ಯಾ ಬಂಧನ

ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯಾ ಅವರನ್ನು ಲಂಡನ್ ನಲ್ಲಿ ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಮಲ್ಯಾ ಅವರನ್ನು ಇಂದು ವೆಸ್ಟ್‌ಮಿನ್ಸ್ಟರ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅಲ್ಲಿನ ಪೊಲೀಸರು ಹಾಜರುಪಡಿಸಲಿದ್ದಾರೆ. ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ನಂತರ ಮಲ್ಯಾ ಅವರನ್ನು ಭಾರತದ ವಶಕ್ಕೆ ಯಾವಾಗ ನೀಡಬೇಕು ಎಂದು ನಿರ್ಧರಿಸಲಾಗುತ್ತದೆ.

ದೇಶ ಬಿಟ್ಟು ಲಂಡನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯಾರನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಮೋದಿ ಸರ್ಕಾರ ಒತ್ತಾಯಿಸಿತ್ತು. ಅವರನ್ನು ಭಾರತಕ್ಕೆ ಕರೆತರುವ ಸಲುವಾಗಿ ಸಾಕಷ್ಟು ಶ್ರಮವಹಿಸಿತ್ತು. ಹಲವು ಬಾರಿ ಭಾರತದ ನ್ಯಾಯಾಲಯಗಳು ನೋಟೀಸ್ ನೀಡಿದ್ದರೂ, ಮಲ್ಯಾ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.