ಭಯೋತ್ಪಾದಕ ಸಂಘಟನೆ ಸೇರಿದ ಪಿಹೆಚ್ಡಿ ವಿದ್ಯಾರ್ಥಿ |News Mirchi

ಭಯೋತ್ಪಾದಕ ಸಂಘಟನೆ ಸೇರಿದ ಪಿಹೆಚ್ಡಿ ವಿದ್ಯಾರ್ಥಿ

ಕಳೆದ ವಾರ ಎಕೆ-47 ರೈಫಲ್ ಹಿಡಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಪಿಎಚ್ಡಿ ವಿದ್ಯಾರ್ಥಿ ಮನ್ನನ್ ವಾನಿ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಆತ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಸೇರಿರುವುದಾಗಿ ಸಂಘಟನೆ ಖಚಿತಪಡಿಸಿದ್ದು, ಆತನ ಸೇರ್ಪಡೆಯನ್ನು ಸ್ವಾಗತಿಸಿದೆ.

ವಿದ್ಯಾವಂತ ಯುವಕರೂ ಸ್ವಾತಂತ್ರ್ಯ ಹೋರಾಟದಲ್ಲಿ ಸೇರುತ್ತಿದ್ದಾರೆ ಎಂದು ವಾನಿಯನ್ನು ಪೋಸ್ಟರ್ ಬಾಯ್ ನಂತೆ ಬಳಸಿಕೊಳ್ಳುತ್ತಿರುವ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಹೇಳಿದ್ದಾನೆ.

ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ವಾಪಸ್ ಬರುವಂತೆ ಮನ್ನನ್ ಕುಟುಂಬ ಮಂಗಳವಾರ ಆತನನ್ನು ಒತ್ತಾಯಿಸಿತ್ತು. ಮಗ ಹಿಜ್ಬುಲ್ ಸಂಘಟನೆ ಸೇರ್ಪಡೆಯಾಗಿರುವುದಕ್ಕೆ ಆತನ ತಂದೆ ಬಶೀರ್ ಅಹಮದ್ ಆಘಾತಗೊಂಡಿದ್ದಾರೆ. ಹಾಸ್ಟೆಲ್ ನಿಂದ ಕಾಣೆಯಾಗುವ ಮುನ್ನ ಆತನ ಜೊತೆ ಸಂಪರ್ಕದಲ್ಲಿದ್ದ ಗುಂಪನ್ನು ಪತ್ತೆ ಹಚ್ಚಲು ಉತ್ತರಪ್ರದೇಶ ಉಗ್ರ ನಿಗ್ರಹ ಪಡೆ ಮುಂದಾಗಿದೆ. ಈ ಮೂಲಕ ಮತ್ತಷ್ಟು ವಿದ್ಯಾರ್ಥಿಗಳು ಅಥವಾ ಆತನ ಸಹಚರರು ಮನ್ನನ್ ನಂತೆ ಬದಲಾಗಿದ್ದಾರಾ ಎಂಬ ತಿಳಿಯಲು ಯತ್ನಿಸಲಾಗುತ್ತಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!