ಶ್ರೀನಗರ: ನಾಲ್ವರು ಹಿಜ್ಬುಲ್ ಉಗ್ರರ ಬಂಧನ

ಶ್ರೀನಗರ: ಇಂದು ಭದ್ರತಾ ಪಡೆಗಳು ಇಬ್ಬರು ಕಾಶ್ಮೀರ ಉಗ್ರರು ಸೇರಿದಂತೆ ನಾಲ್ವರು ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಬಂಧಿಸಿವೆ. ಖಚಿತ ಮಾಹಿತಿಯನ್ನಾಧರಿಸಿ ಚೋಗಲ್ ಮತ್ತು ಹಂದ್ವಾರಾ ಬಳಿ ಸೇನೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಮೆಹ್ರಾಜುದೀನ್ ಮತ್ತು ಒಬೈದ್ ಶಫಿ ಎಂಬುವವರನ್ನು ವಶಕ್ಕೆ ಪಡೆದರು.

ಶಸ್ತ್ರಾಸ್ತ್ರಗಳನ್ನು ಪಡೆಯಲು ಹಂದ್ವಾರಕ್ಕೆ ಬಂದಿದ್ದಾಗಿ ಇವರು ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದರು. ಸಾಮಾಜಿಕ ತಾಣಗಳಲ್ಲಿ ಯುವಕರನ್ನು ಪ್ರಚೋದಿಸಿ ಉಗ್ರ ಭಯೋತ್ಪಾದಕ ಕೃತ್ಯಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದರು ಎಂಬುದು ಸೈಬರ್ ನಿಗಾ ಘಟಕವು ಪತ್ತೆ ಹಚ್ಚಿತು. ಬಂಧಿತರು ನೀಡಿದ ಸುಳಿವಿನ ಆಧಾರದ ಮೇಲೆ ಮತ್ತಿಬ್ಬರು ಉಗ್ಗರರನ್ನು ಬಂಧಿಸಲಾಗಿದೆ.